ಸೇವಾ ದರ್ಶನಕ್ಕೆ ವ್ಯವಸ್ಥೆ ಮಾಡಿ ಅಥವಾ ಭಕ್ತನಿಗೆ 45 ಲಕ್ಷ.ರೂ. ಪರಿಹಾರ ಪಾವತಿಸಿ

Update: 2022-09-03 18:08 GMT

ಸೇಲಂ,ಸೆ.3: ವಿಶೇಷ ಪೂಜೆಗಾಗಿ ಹಣವನ್ನು ಸಂಗ್ರಹಿಸುವ ದೇವಸ್ಥಾನವು ನಿಗದಿತ ದಿನಾಂಕದಂದು ದರ್ಶನ/ಪೂಜೆಗೆ ಅವಕಾಶವನ್ನು ಒದಗಿಸಲು ನಿರಾಕರಿಸುವುದು ‘ಸೇವೆಯ ನ್ಯೂನತೆ’ಯಾಗುತ್ತದೆಯೇ? ಹೌದು,ತಮಿಳುನಾಡಿನ ಸೇಲಂ ಜಿಲ್ಲೆಯ ಗ್ರಾಹಕ ನ್ಯಾಯಾಲಯವು ಹಾಗೆಂದು ಸ್ಪಷ್ಟಪಡಿಸಿದೆ.

 16 ವರ್ಷಗಳ ಹಿಂದೆ ಪ್ರತಿಷ್ಠಿತ ಮೆಲ್ಚಾಟ್ ವಸ್ತ್ರಂ ಸೇವೆಗಾಗಿ ದಿನಾಂಕವನ್ನು ಕಾಯ್ದರಿಸಿದ್ದ ಕೆ.ಆರ್.ಹರಿಭಾಸ್ಕರ್ ಅವರಿಗೆ ಈ ಸೇವೆಗಾಗಿ ನೂತನ ದಿನಾಂಕವೊಂದನ್ನು ವ್ಯವಸ್ಥೆ ಮಾಡುವಂತೆ ಅಥವಾ ‘ಸೇವಾ ನ್ಯೂನತೆ ಮತ್ತ ಮಾನಸಿಕ ಯಾತನೆ ’ಗೆ ಪರಿಹಾರವಾಗಿ 45 ಲ.ರೂ.ಗಳನ್ನು ಪಾವತಿಸುವಂತೆ ಗ್ರಾಹಕ ನ್ಯಾಯಾಲಯವು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಮಂಡಳಿಗೆ ತನ್ನ ಆ.18ರ ತೀರ್ಪಿನಲ್ಲಿ ಆದೇಶಿಸಿದೆ.
ಹರಿಭಾಸ್ಕರ್ ಅವರು 2006 ಜೂನ್ನಲ್ಲಿ 12,250 ರೂ.ಗಳನ್ನು ಪಾವತಿಸಿ 2020ರಲ್ಲಿ ಮೆಲ್ಚಾಟ್ ವಸ್ತ್ರಂ ಸೇವೆಗಾಗಿ ಅವಕಾಶವನ್ನು ಕಾಯ್ದಿರಿಸಿದ್ದರು. ಆದರೆ ಸಾಂಕ್ರಾಮಿಕದಿಂದಾಗಿ ದೇವಸ್ಥಾನವು ಮುಚ್ಚಲ್ಪಟಿದ್ದರಿಂದ ಸೇವೆಗೆ ಅವಕಾಶ ದೊರೆಯದೇ ಹತಾಶರಾಗಿದ್ದರು. ನೂತನ ದಿನಾಂಕವನ್ನು ನೀಡಲು ಸಾಧ್ಯವಿಲ್ಲ ಎಂದು ಟಿಟಿಡಿ ತಿಳಿಸಿದಾಗ ಅವರು ಇನ್ನಷ್ಟು ಹತಾಶರಾಗಿದ್ದರು. ‘ವಿಐಪಿ ಬ್ರೇಕ್ ದರ್ಶನ’ ಅಥವಾ ಟಿಕೆಟ್ ಹಣದ ಮರುಪಾವತಿಯನ್ನು ಆಯ್ದುಕೊಳ್ಳವಂತೆ ಅವರಿಗೆ ಸೂಚಿಸಲಾಗಿತ್ತು.
ಈ ಆಯ್ಕೆಗಳು ಹರಿ ಭಾಸ್ಕರ್ ಗೆ ತೃಪ್ತಿಕರವಾಗಿರಲಿಲ್ಲ,ಹೀಗಾಗಿ ಅವರು ಸೇಲಂ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News