×
Ad

ಉತ್ತಮ ಕೆಲಸದ ಮೂಲಕ ಸಮಾಜಕ್ಕೆ ಮಾದರಿಯಾಗಿ: ಜನಾರ್ದನ ಪೂಜಾರಿ ಕರೆ

Update: 2022-09-04 14:56 IST

ಮಂಗಳೂರು, ಸೆ. 4: ಸಮಾಜಕ್ಕೆ ಮೋಸ ಮಾಡದೆ ನುಡಿದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಉತ್ತಮ ಕೆಲಸ ಮಾಡಿದರೆ ಸಂಘಟನೆಗೂ ಒಳ್ಳೆಯದಾಗುತ್ತದೆ ಎಂದು ಕೇಂದ್ರ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಕರೆ ನೀಡಿದರು.

ನೂತನವಾಗಿ ರಚನೆಯಾದ ಮಂಗಳೂರು ತಾಲೂಕು ಬಿಲ್ಲವ ಸಂಘವನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೊರಗಪ್ಪ ಸ್ಮಾರಕ ಸಭಾಂಗಣದಲ್ಲಿಂದು ಅವರು ಉದ್ಘಾಟಿಸಿ,  ಮಾತನಾಡುತ್ತಿದ್ದರು.

ಈಗ ಕಷ್ಟದ ದಿನಗಳು ನಮ್ಮ ಮುಂದಿವೆ. ಅದನ್ನು ಆ ಗೋಕರ್ಣನಾಥ ನಿವಾರಿಸುತ್ತಾರೆ. ನಾನು ಗೋಕರ್ಣನಾಥ ದೇವಸ್ಥಾನದ ಕೆಲಸ ಆರಂಭ ಮಾಡಿದಾಗಲೂ ಕಷ್ಟ ಎದುರಿಸಿದ್ದೇನೆ. ಕಷ್ಟದಲ್ಲಿರುವ ಬಡವರಿಗೆ ಪ್ರಾಮಾಣಿಕ ವಾಗಿ ಸಹಾಯ ಮಾಡುವ ಮೂಲಕ ಕ್ರೀಯಾಶೀಲರಾಗಿ, ಸಮಾರಂಭದಲ್ಲಿ  ಒಳ್ಳೆಯ ಮಾತುಗಳನ್ನಾಡಿದ  ಎಲ್ಲರೂ ತಮ್ಮ ಮಾತಿನಂತೆ ನಡೆದು ತೋರಿಸಿ ಸಮಾಜಕ್ಕೆ ಮಾದರಿಯಾಗುವಂತೆ ಕಾರ್ಯ ನಿರ್ವಹಿಸಿ ಎಂದು ಅವರು ಶುಭ ಹಾರೈಸಿದರು.

ಸಮಾರಂಭದಲ್ಲಿ ಎಸ್.ಎನ್.ಡಿ.ಪಿ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ ಮಾತನಾಡುತ್ತಾ, ರಾಜ್ಯದ ಈಡಿಗ, ಬಿಲ್ಲವ ಸಮುದಾಯದ ಸುಮಾರು 26 ಪಂಗಡಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಂಘಟಿತರಾಗಬೇಕಾಗಿದೆ. ಬಿಲ್ಲವ ಸಮುದಾಯಕ್ಕೆ ಯಾವ ರೀತಿ ರಾಜಕೀಯವಾಗಿ ಸಹಾಯ ಮಾಡಬಹುದು ಎನ್ನುವುದಕ್ಕೆ ಜನಾರ್ದನ ಪೂಜಾರಿಯವರು ಮಾಡಿರುವ ಕೆಲಸಗಳು ಮಾದರಿ. ನಮ್ಮ ರಾಜಕೀಯ ನಾಯಕರು ಈ ನಿಟ್ಟಿನಲ್ಲಿ ಸಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಬಿಲ್ಲವ ಸಮುದಾಯ ಎಲ್ಲಾ ಹಿಂದುಳಿದ ಸಮುದಾಯದೊಂದಿಗೆ ರಾಜಕೀಯ ಶಕ್ತಿಯಾಗಬೇಕಾಗಿದೆ ಎಂದು ಸೈದಪ್ಪ ಗುತ್ತಿಗೆದಾರರು ನೂತನ ಸಂಘಕ್ಕೆ ಶುಭ ಹಾರೈಸಿದರು.

ಮಾಜಿ ಶಾಸಕ ರುಕ್ಮಯ ಪೂಜಾರಿ ನೂತನ ಸಂಘಕ್ಕೆ  ಶುಭ ಹಾರೈಸಿದರು. ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿದರು.

ಸಮಾರಂಭದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಅಧ್ಯಕ್ಷ ಜಿತೇಂದ್ರ ಜೆ.ಸುವರ್ಣ ಅಧ್ಯಕ್ಷ ತೆ ವಹಿಸಿದ್ದರು. ಗೌರವಾಧ್ಯಕ್ಷ ರಂಜನ್ ಮಿಜಾರ್, ಕುದ್ರೋಳಿ ಶ್ರೀ ಗೋಕರ್ಣ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಸಾಯಿರಾಮ,  ಅತಿಥಿಗಳಾಗಿ ರವಿಶಂಕರ್ ಮಿಜಾರ್, ರಾಜಶೇಖರ ಕೋಟ್ಯಾನ್, ಚಂಚಲಾ ತೇಜೋಮಯ, ರಾಮಚಂದ್ರ, ಚಿತ್ತರಂಜನ್ ಬೋಳಾರ್, ನಾರಾಯಣ ಪೂಜಾರಿ, ಗಣೇಶ್ ಅಮೀನ್ ಸಂಕಮಾರ್, ಅಕ್ಷಿತ್ ಸುವರ್ಣ, ಉದಯ ಅಮೀನ್ ಮಟ್ಟು, ಎಂ.ಎಸ್.ಕೋಟ್ಯಾನ್, ಲೀಲಾಕ್ಷ ಕರ್ಕೇರ, ಸುರೇಶ್ ಚಂದ್ರರ್ ಕೋಟ್ಯಾನ್, ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಅಧ್ಯಕ್ಷ ಜಿತೇಂದ್ರ ಜೆ.ಸುವರ್ಣ ಅಧ್ಯಕ್ಷ ತೆ ವಹಿಸಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಲೋಕನಾಥ್ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ಪುರುಷೋತ್ತಮ ಪೂಜಾರಿ ಪ್ರಸ್ತಾವನೆಯ ಮಾತುಗಳನ್ನಾಡಿದರು. ಚರಣ್ ವಂದಿಸಿದರು. ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News