×
Ad

ಸಾಂಪ್ರಾದಾಯಿಕ ಮರಳು ತೆರವು: ದಾಖಲೆ ಸಲ್ಲಿಸಲು ಸೂಚನೆ

Update: 2022-09-04 17:08 IST

ಉಡುಪಿ, ಸೆ.4: ಟೆಂಡರ್ ಕಂ-ಹರಾಜು ಮೂಲಕ ಜಿಲ್ಲೆಯಲ್ಲಿ ಮಾನವ ಶ್ರಮದಿಂದ ಮರಳು ಬ್ಲಾಕ್‌ಗಳನ್ನು ವಿಲೇವಾರಿ ಮಾಡುವ ಸಂಬಂಧ ಜಿಲ್ಲಾ ಮರಳು ಉಸ್ತುವಾರಿ ಉಪಸಮಿತಿ ಸಭೆ ಇತ್ತೀಚೆಗೆ ಜರಗಿತು.

ಈಗಾಗಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾದ ಸಂಭವನೀಯ ಪಟ್ಟಿಯಲ್ಲಿರುವ ಜಿಲ್ಲೆಯ ತಾತ್ಕಾಲಿಕ ಪರವಾನಿಗೆದಾರರು/ಪರವಾನಿಗೆದಾರರು ಒಂದು ವರ್ಷದಿಂದ ವಾಸ್ತವ್ಯ ಹೊಂದಿರುವ ಬಗ್ಗೆ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರರಿಂದ ವಾಸ ದೃಢೀಕರಣ ಪತ್ರವನ್ನು ಪಡೆದು ಹಾಗೂ ಸಾಂಪ್ರಾದಾಯಿಕವಾಗಿ ಮರಳು ತೆರವುಗೊಳಿಸಿರುವ ಬಗ್ಗೆ ಹೊಂದಿರುವ ದಾಖಲಾತಿ/ಪರವಾನಿಗೆ ಪ್ರತಿ ಹಾಗೂ ಇತರೆ ಪೂರಕ ದಾಖಲೆಗಳನ್ನು ಹಿರಿಯ ೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ಕಚೇರಿಗೆ  ಸೆ.೧೨ರೊಳಗಾಗಿ ಸಲ್ಲಿಸಬೇಕು ಎಂದು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿಯವರ ಕಚೇರಿ ಗಣಿ ಭೂ ವಿಜ್ಞಾನ ಇಲಾಖೆ, ರಜತಾದ್ರಿ, ಎ-ಬ್ಲಾಕ್, ಮೊದಲನೇ ಮಹಡಿ, ಮಣಿಪಾಲ, ಉಡುಪಿ ದೂರವಾಣಿ ಸಂ.0820-2572333 ಸಂಪರ್ಕಿಸುವಂತೆ ಗಣಿ ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News