ಕಳೆದ ಎಂಟು ವರ್ಷಗಳಲ್ಲಿ ಅಸ್ಸಾಮಿನಲ್ಲಿ ಅತ್ಯಂತ ಹೆಚ್ಚು ದೇಶದ್ರೋಹ ಪ್ರಕರಣಗಳು ದಾಖಲು

Update: 2022-09-05 11:25 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ,ಸೆ.5: ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (NCRB)ದ ಅಂಕಿಅಂಶಗಳಂತೆ 2014 ಮತ್ತು 2021ರ ನಡುವೆ ಅತ್ಯಂತ ಹೆಚ್ಚಿನ ದೇಶದ್ರೋಹ(sedition case) ಪ್ರಕರಣಗಳು ಅಸ್ಸಾಮಿನಲ್ಲಿ(Assam)

ಈ ಎಂಟು ವರ್ಷಗಳ ಅವಧಿಯಲ್ಲಿ ಒಟ್ಟು 475 ಪ್ರಕರಣಗಳ ಪೈಕಿ ಅರ್ಧಕ್ಕೂ ಹೆಚ್ಚು ಅಂದರೆ 250 ಪ್ರಕರಣಗಳು ಆರು ರಾಜ್ಯಗಳಲ್ಲಿ ದಾಖಲಾಗಿವೆ. 69 ದೇಶದ್ರೋಹ ಪ್ರಕರಣಗಳೊಂದಿಗೆ ಅಸ್ಸಾಂ ಅಗ್ರಸ್ಥಾನದಲ್ಲಿದ್ದರೆ ಹರ್ಯಾಣ (42),ಜಾರ್ಖಂಡ್ (40),ಕರ್ನಾಟಕ (38),ಆಂಧ್ರಪ್ರದೇಶ (32) ಮತ್ತು ಜಮ್ಮು-ಕಾಶ್ಮೀರ (29) ನಂತರದ ಸ್ಥಾನಗಳಲ್ಲಿವೆ.

ಮೇಘಾಲಯ,ಮಿಜೋರಾಂ,ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು,ಚಂಡಿಗಡ,ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಹಾಗೂ ಪುದುಚೇರಿಗಳಲ್ಲಿ ಈ ಅವಧಿಯಲ್ಲಿ ಒಂದೇ ಒಂದು ದೇಶದ್ರೋಹ ಪ್ರಕರಣ ದಾಖಲಾಗಿಲ್ಲ.

ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ ಮತ್ತು ಲಕ್ಷದ್ವೀಪಗಳಲ್ಲಿ ತಲಾ ಕೇವಲ ಒಂದು ಪ್ರಕರಣ ದಾಖಲಾಗಿದೆ.

ಮಣಿಪುರದಲ್ಲಿ 28, ಉ.ಪ್ರದೇಶದಲ್ಲಿ 27, ಬಿಹಾರದಲ್ಲಿ 25, ಕೇರಳದಲ್ಲಿ 25, ನಾಗಾಲ್ಯಾಂಡ್‌ನಲ್ಲಿ 17, ದಿಲ್ಲಿಯಲ್ಲಿ 13, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 12 ಪ್ರಕರಣಗಳು ದಾಖಲಾಗಿವೆ. 

ಕಳೆದ ಎಂಟು ವರ್ಷಗಳಲ್ಲಿ ಪ್ರತಿ ಆರು ದೇಶದ್ರೋಹ ಪ್ರಕರಣಗಳ ಪೈಕಿ ಒಂದು ಅಸ್ಸಾಮಿನಲ್ಲಿ ದಾಖಲಾಗಿದೆ. ರಾಜ್ಯದಲ್ಲಿಯ ಒಟ್ಟು 60 ಪ್ರಕರಣಗಳ ಪೈಕಿ 2021ರಲ್ಲಿ 3, 2020ರಲ್ಲಿ 12,  2019 ಮತ್ತು 2018ರಲ್ಲಿ ತಲಾ 17 ಮತ್ತು 2014ರಲ್ಲಿ ಒಂದು ಪ್ರಕರಣ ದಾಖಲಾಗಿದ್ದರೆ, 2015 ಮತ್ತು 2016ರಲ್ಲಿ ಯಾವುದೇ ದೇಶದ್ರೋಹ ಪ್ರಕರಣ ದಾಖಲಾಗಿಲ್ಲ.

ಎನ್‌ಸಿಆರ್‌ಬಿ ಅಂಕಿಅಂಶಗಳಂತೆ ಕಳೆದ ವರ್ಷ ಐಪಿಸಿಯ ಕಲಂ 124 ಎ ಅಡಿ ದಾಖಲಾಗಿರುವ ಒಟ್ಟು 76 ದೇಶದ್ರೋಹ ಪ್ರಕರಣಗಳ ಪೈಕಿ ಅತ್ಯಂತ ಹೆಚ್ಚಿನ (29) ಪ್ರಕರಣಗಳು ಆಂಧ್ರಪ್ರದೇಶದಲ್ಲಿ ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News