×
Ad

ವಿದ್ಯುತ್ ಮಾಪಕ ಸರಬರಾಜಿಗೆ ಆಗ್ರಹ

Update: 2022-09-05 18:06 IST

ಉಡುಪಿ, ಸೆ.5: ಉಡಪಿ ಜಿಲ್ಲೆಗೆ ಅಗತ್ಯವಿರುವ ವಿದ್ಯುತ್ ಮಾಪಕಗಳನ್ನು ಕೂಡಲೇ ಸರಬರಾಜು ಮಾಡುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಇಂಧನ ಸಚಿವ ವಿ.ಸುನಿಲ್ ಕುಮಾರ್ ಅವರನ್ನು ಆಗ್ರಹಿಸಿದ್ದಾರೆ.

ಮಂಗಳೂರು ವಿದ್ಯುಚ್ಛಕ್ತಿ ಕಂಪೆನಿಯ ಉಡುಪಿ ವಿಭಾಗೀಯ ಕಛೇರಿ ವ್ಯಾಪ್ತಿಯ ಕೃಷಿ ಪಂಪು ಸೆಟ್ ಅಳವಡಿಸಲು ರೆೃತರಿಗೆ, ಗೃಹ ಬಳಕೆದಾರರಿಗೆ ವಿದ್ಯುತ್ ಸಂಪರ್ಕ ಪಡೆಯಲು ಕಳೆದೆರಡು ತಿಂಗಳಿಂದ ವಿದ್ಯುತ್ ಮಾಪಕಗಳ ಸರಬರಾಜು ಸ್ಥಗಿತಗೊಂಡು ಬಳಕೆದಾರರು ಪರದಾಡುವಂತಾಗಿದೆ. ಅಲ್ಲದೆ ವಿಶೇಷವಾಗಿ ಕೃಷಿಕರು ಭಾರೀ ತೊಂದರೆಗೆ ಒಳಗಾಗಿದ್ದಾರೆ ಎಂದು ಮೊಯಿ ದಿನಬ್ಬ ರಾಜ್ಯದ ಇಂಧನ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸಚಿವರ ತವರು ಜಿಲ್ಲೆಯಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣ ವಾಗಿರು ವುದು ತೀರಾ ಕಳವಳಕಾರಿಯಾಗಿದ್ದು ಅರ್ಜಿ ಸಲ್ಲಿಸಿದ ರೆೃತರಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕಾಗಿ ವಿದ್ಯುತ್ ಮಾಪಕಗಳನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಅವರು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News