ಉಡುಪಿ: ಜನೌಷಧಿ ಕೇಂದ್ರದಿಂದ ಬಿಲ್ವ ಪತ್ರೆ ಅಭಿಯಾನ
Update: 2022-09-05 21:24 IST
ಉಡುಪಿ, ಸೆ.5: ಅಜ್ಜರಕಾಡು ಜಿಲ್ಲಾಸ್ಪತ್ರೆ ಆವರಣದೊಳಗಿರುವ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದಿಂದ ಬಿಲ್ವ ಪತ್ರೆ ಗಿಡಗಳ ಉಚಿತ ವಿತರಣೆ ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ವತಿಯಿಂದ ಸೋಮವಾರ ನಡೆಯಿತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಬಿಲ್ವ ಪತ್ರೆ ಗಿಡ ಗಳನ್ನು ವಿತರಿಸಿ ಶುಭ ಹಾರೈಸಿದರು. ಸುಮಾರು 500ಕ್ಕೂ ಅಧಿಕ ಮಂದಿಗೆ ಗಿಡಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಜಯಂಟ್ಸ್ ವೆಲ್ಪೇರ್ ಫೌಂಡೇಶನ್ ಕೇಂದ್ರ ಸಮಿತಿ ಸದಸ್ಯ ದಿನಕರ ಅಮೀನ್, ಜಯಂಟ್ಸ್ ಪೆಡರೇಶನ್‌ನ ಮಾಜಿ ಅಧ್ಯಕ್ಷ ಮಧುಸೂಧನ ಹೇರೂರು, ಜಯಂಟ್ಸ್ ಬ್ರಹ್ಮಾವರದ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಉಡುಪಿಯ ಅಧ್ಯಕ್ಷ ಇಕ್ಬಾಲ್ ಮನ್ನಾ, ನಿರ್ದೇಶಕರಾದ ಅಣ್ಣಯ್ಯ ದಾಸ್, ಮಿಲ್ಟನ ಓಲಿವೇರಾ ರೋನಾಲ್ಡ್ ಡಿಸಿಲ್ವ, ಚೇತನ್‌ಕುಮಾರ್ ಶೆಟ್ಟಿ, ರೇಖಾ ಪೈ ಮತ್ತಿತರು ಉಪಸ್ಥಿತರಿದ್ದರು.