×
Ad

ವಿವಾಹಿತೆ ನಾಪತ್ತೆ

Update: 2022-09-05 21:43 IST

ಮಂಗಳೂರು, ಸೆ.5: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಸ್ನೇಹಾ ಬನ್ಸೋಡೆ (28) ಎಂಬಾಕೆ ಸೆ.1ರಿಂದ ಕಾಣೆಯಾದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹಾ ಬನ್ಸೋಡೆ ಸೆ.1ರಂದು ಮಗನನ್ನು ಶಾಲೆಗೆ ಬಿಟ್ಟ ಬಳಿಕ ಬೆಳಗ್ಗೆ 8.30ಕ್ಕೆ ರಿಕ್ಷಾವೊಂದರಲ್ಲಿ ಹತ್ತಿ ಹೋದುದನ್ನು ಮನೆ ಸಮೀಪದವರು ತಿಳಿಸಿದ್ದಾರೆ. ಅದರಂತೆ ರಿಕ್ಷಾ ಚಾಲಕನನ್ನು ವಿಚಾರಿಸಿದಾಗ ಮನೆಯಿಂದ ಪಣಂಬೂರು ಜಂಕ್ಷನ್‌ವರೆಗೆ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿರುತ್ತದೆ.  ಆಕೆ ರಾತ್ರಿ ಹೊತ್ತು ವಾಟ್ಸ್‌ಆ್ಯಪ್ ಚಾಟಿಂಗ್ ಮಾಡುತ್ತಿದ್ದು, ಪ್ರಶ್ನಿಸಿದರೆ ಸಿಟ್ಟಾಗುತ್ತಿದ್ದಳು ಎಂದು ಸ್ನೇಹಾಳ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

5 ಅಡಿ ಎತ್ತರದ ಈಕೆ ಮನೆಯಿಂದ ಹೊರಟು ಹೋಗುವಾಗ ಕೆಂಪು ಬಣ್ಣದ ಟಾಪ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಳು. ಮರಾಠಿ, ಕನ್ನಡ, ಹಿಂದಿ ಮಾತನಾಡುತ್ತಾಳೆ. ಈಕೆಯನ್ನು ಕಂಡವರು ಠಾಣೆಗೆ (ದೂ.ಸಂ: 0824-2220530) ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News