×
Ad

ಧಾರ್ಮಿಕ, ಲೌಕಿಕ ಶಿಕ್ಷಣ ಅತ್ಯಗತ್ಯ : ಆತೂರು ಜಿಫ್ರಿ ತಂಙಳ್

Update: 2022-09-05 21:50 IST

ಆತೂರು: ವಿಧ್ಯೆಯಿಂದ ಮಾತ್ರ  ಜೀವನ  ಪಾವನ. ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಈ ಯುಗದಲ್ಲಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಆತೂರು ಜಮಾಅತಿನ ನಿರ್ಣಯ ಅಭಿನಂದನಾರ್ಹವಾಗಿದೆ ವೆಂದು ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಹೇಳಿದರು.

ಅವರು  ಆತೂರು  ಬದ್ರಿಯಾ ಜಮಾಅತ್ ಆಡಳಿತ ಮಂಡಳಿಯ ಪ್ರಗತಿಪರ ಯೋಜನೆ ಯಂತೆ ಇಲ್ಲಿನ ಬದ್ರಿಯಾ ಹಾಲ್ ನಲ್ಲಿ ಸೋಮವಾರ ನಡೆದ ಶರೀಅತಿನೊಂದಿಗೆ ಬಾಲಕಿಯರಿಗೆ ಪದವಿ ಕಾಲೇಜಿನ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಮಾಅತ್ ಅಧ್ಯಕ್ಷ ಎಚ್. ಅಹ್ಮದ್ ಕುಂಞಿ ಅಧ್ಯಕ್ಷತೆ  ವಹಿಸಿದ್ದರು.

ಪ್ರೊ. ಹಂಝ ಸಖಾಫಿ, ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲೆಯ ಸಂಚಾಲಕರಾದ ಆದಂ ಹಾಜಿ ಪಿಲಿಕುಡೆಲು, ಕಾರ್ಯದರ್ಶಿ ಯಹ್ಯಾ ಎಲ್ಯಂಗ, ಆಡಳಿತ ಮಂಡಳಿ ಪ್ರಮುಖರಾದ ಬಿ ಪಿ ಇಬ್ರಾಹಿಂ, ಪೊಡಿಕುಂಞಿ ನೀರಾಜೆ, ಝಕರಿಯ ಹಾಜಿ, ಸಿದ್ದೀಕ್. ಎನ್, ಕೆ.ಸುಲೈಮಾನ್, ಬಿ. ಅರ್.ಅಬ್ದುಲ್ ಖಾದರ್, ಎ.ಕೆ.ಬಶೀರ್, ಹಫೀಝ್, ನೌಫಲ್ ಮತ್ತಿತರರು  ಉಪಸ್ಥಿತರಿದ್ದರು.

ಮೆನೇಜರ್ ಕೆ.ಯಂ.ಯಸ್.ಫೈಝಿ ಕರಾಯ ಸ್ವಾಗತಿಸಿದರು ಕಾರ್ಯದರ್ಶಿ ಸಿರಾಜ್ ಬಡ್ಡಮೆ ವಂದಿಸಿದರು. ಪ್ರಿನ್ಸಿಪಾಲರಾದ ಮುಫೀದಾ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News