ಕಾಂತಾವರ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಜಯಂತಿಗೆ ಪ್ರಶಸ್ತಿ
Update: 2022-09-05 21:59 IST
ಕಾರ್ಕಳ : ಕಾಂತಾವರ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಜಯಂತಿ ಎಸ್. ಪೂಜಾರಿ ಅವರಿಗೆ ದ.ಕ. ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಕೊಡಮಾಡುವ ಉತ್ತಮ ಕೃತಕ ಗರ್ಭಧಾರಣೆ ಕಾರ್ಯಕರ್ತೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೆ. 3ರಂದು ಮಂಗಳೂರಿನಲ್ಲಿ ನಡೆದ ದ.ಕ. ಹಾಲು ಉತ್ಪಾದಕರ ಒಕ್ಕೂಟದ 36ನೇ ಮಹಾಸಭೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಸತತ 7ನೇ ಬಾರಿಗೆ ಜಯಂತಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಜಯರಾಮ ರೈ, ನಿರ್ದೇಶಕರಾದ ಮುಡಾರು ಸುಧಾಕರ್ ಶೆಟ್ಟಿ, ಸ್ಮೀತಾ ಆರ್. ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ಸಾಣೂರು ನರಸಿಂಹ ಕಾಮತ್, ಕಮಲಾಕ್ಷ ಹೆಬ್ಬಾರ್, ಸುಭದ್ರ ರಾವ್, ಪ್ರಕಾಶ್ಚಚಂದ್ರ ಶೆಟ್ಟಿ, ಒಕ್ಕೂಟದ ಎಂ.ಡಿ. ಅಶೋಕ್ ಉಪಸ್ಥಿತರಿದ್ದರು.