ಆಹಾರ ಕೊರತೆಯಿರುವ ಆಫ್ರಿಕನ್ ದೇಶಗಳಿಗೆ ಕೀಟಗಳನ್ನು ತಿನ್ನಲು ಸಲಹೆ

Update: 2022-09-05 17:04 GMT
photo :NDTV

ಲಂಡನ್, ಸೆ.5: ಆಹಾರದ ತೀವ್ರ ಕೊರತೆಯಿಂದಾಗಿ  ಹಸಿವಿನಿಂದ ಕಂಗೆಟ್ಟಿರುವ ಆಫ್ರಿಕಾ ದೇಶಗಳ ಜನತೆ ಕೀಟಗಳನ್ನು ತಿನ್ನಲಿ ಎಂದಬ ಬ್ರಿಟನ್‌ನ ಸಂಸ್ಥೆಯೊಂದು ಸಲಹೆ ನೀಡಿದೆ. 

ಆಫ್ರಿಕಾ ಖಂಡದ ಅನೇಕ ದೇಶಗಳಲ್ಲಿ ಖಾದ್ಯ ಕೀಟಗಳು ಸಾಂಪ್ರದಾಯಿಕ ಪಾಕಪದ್ಧತಿಯ ಅಂಶವಾಗಿದೆ. ಖಾದ್ಯ ಕೀಟಗಳು ಸಮೃದ್ಧ ಪ್ರೊಟೀನ್‌ನ ಸಮರ್ಥ ಮೂಲವೆಂದು ಹೆಸರಾಗಿದ್ದು ಇಲ್ಲಿ 25ಕ್ಕೂ ಹೆಚ್ಚು ಕೀಟಪ್ರಬೇಧಗಳು ಖಾದ್ಯವಾಗಬಹುದು ಎಂದು ನಂಬಲಾಗಿದೆ. 

ಇವುಗಳನ್ನು ಬೆಳೆಸಲು ಸಾಂಪ್ರದಾಯಿಕ ಜಾನುವಾರುಗಳಿಗಿಂತ ಕಡಿಮೆ ಭೂಮಿ ಮತ್ತು ನೀರಿನ ಅಗತ್ಯವಿರುತ್ತದೆ. ಆದ್ದರಿಂದ ಕಾಂಗೋ ಗಣರಾಜ್ಯ ಮತ್ತು ಜಿಂಬಾಬ್ವೆಗಳಲ್ಲಿ ಖಾದ್ಯ ಕೀಟಗಳನ್ನು ಬೆಳೆಸುವ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗುವುದು. ಆಫ್ರಿಕನ್ ಕಂಬಳಿ ಹುಳಗಳು, ವಲಸೆ ಮಿಡತೆ ಹಾಗೂ ಕಪ್ಪು ಸೈನಿಕ  ನೊಣಗಳನ್ನು ಕಾಂಗೊ ಗಣರಾಜ್ಯದಲ್ಲಿ ಬ್ರಿಟನ್‌ನ ದತ್ತಿ ಸಂಸ್ಥೆ ಆರಂಭಿಸುವ 50,000 ಪೌಂಡ್ಸ್ ಮೊತ್ತದ ಯೋಜನೆಯಲ್ಲಿ ಒದಗಿಸಲಾಗುವುದು. ಆದರೆ ವಿಶ್ವದ ಹಲವು ಪ್ರದೇಶಗಳಲ್ಲಿ ಸಾಂಸ್ಕೃತಿಕ ಹಿಂಜರಿಕೆ ಮತ್ತು ಅಭಿರುಚಿಯ ಸಮಸ್ಯೆಯ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ವಿಸ್ತರಿಸುವುದಕ್ಕೆ ಅಡ್ಡಿಯಾಗಿದೆ ಎಂದು `ದಿ ಗಾರ್ಡಿಯನ್' ವರದಿ ಮಾಡಿದೆ. 

ಪೂರ್ವ ಆಫ್ರಿಕಾ ವಲಯದಲ್ಲಿ 22 ಮಿಲಿಯನ್ ಜನತೆ ಆಹಾರದ ಕೊರತೆ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News