ಮಂಗಳೂರು ವಿವಿ ಪ್ರಶ್ನೆಪತ್ರಿಕೆ ಅವಾಂತರ; ಆಡಳಿತ ವೈಫಲ್ಯ ಸರಿಪಡಿಸಲು ಒತ್ತಾಯಿಸಿ ಎಸ್‌ಐಓ ಮನವಿ

Update: 2022-09-05 17:13 GMT

ಮಂಗಳೂರು: ಬಿಬಿಎ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಿದ ಮಂಗಳೂರು ವಿವಿ ಆಡಳಿತ ವೈಫಲ್ಯವನ್ನು ಸರಿಪಡಿಸಲು ವಿವಿಯ ಕುಲಪತಿ, ಕುಲಸಚಿವರು ಮತ್ತು ಪರೀಕ್ಷಾ ವಿಭಾಗದ ಅಧಿಕಾರಿಗಳಿ ಮನವಿ ನೀಡಿ ಎಸ್.ಐ.ಓ (SIO) ಮಂಗಳೂರು ಒತ್ತಾಯಿಸಿದೆ.

ಮಂಗಳೂರು ವಿವಿಯ ಬಿಬಿಎ ಪದವಿ ವಿದ್ಯಾರ್ಥಿಗಳ ದ್ವಿತೀಯ ಸೆಮಿಸ್ಟರ್ ಕನ್ನಡ ವಿಷಯದ ಪರೀಕ್ಷೆಯು  ಸೋಮವಾರ ನಿಗದಿಯಾಗಿತ್ತು, ಅದರಂತೆ ವಿದ್ಯಾರ್ಥಿಗಳು ಇಂದು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ದ್ವಿತೀಯ ಸೆಮಿಸ್ಟರಿನ ಪ್ರಶ್ನೆಪತ್ರಿಕೆಯಲ್ಲಿ ಪ್ರಥಮ ಸೆಮಿಸ್ಟರಿನ ಪಠ್ಯಕ್ರಮಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕಂಡುಬಂದಿದ್ದರಿಂದ ಪರೀಕ್ಷಾ ಕೊಠಡಿಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿ ವಿವಿಯ ಆದೇಶ ಮೇರೆಗೆ ಇಂದಿನ ಪರೀಕ್ಷೆಯನ್ನು ರದ್ದುಪಡಿಸಿ, ಮುಂದೂಡಲಾಗಿದೆ.

ಶೈಕ್ಷಣಿಕ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ವಿವಿಯ ಆಡಳಿತ ಮಂಡಳಿ ಮತ್ತು ಪರೀಕ್ಷಾ ವಿಭಾಗದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಿಯ ಈ ಅವಾಂತರಕ್ಕೆ ಕಾರಣವಾದವರನ್ನು ತಕ್ಷಣವೇ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಮುಂದೆ ಈ ರೀತಿಯ ಅವಾಂತರವಾಗದಂತೆ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಎಸ್.ಐ.ಓ (SIO) ಮಂಗಳೂರು ಘಟಕದ ನಿಯೋಗವು ವಿವಿಯ ಪರೀಕ್ಷಾ ವಿಭಾಗದ ಅಧಿಕಾರಿಗಳನ್ನು ಭೇಟಿ ಮಾಡಿ, ಮನವಿ ನೀಡಿ ಒತ್ತಾಯಿಸಿದೆ.

ಎಸ್.ಐ.ಓ ಮಂಗಳೂರು ನಗರ ಘಟಕದ ಕಾರ್ಯದರ್ಶಿ ಮೊಹಮ್ಮದ್ ಹಯ್ಯಾನ್ ನೇತೃತ್ವದ ನಿಯೋಗವು ವಿವಿಯ ಕುಲಪತಿ, ಕುಲಸಚಿವರು ಮತ್ತು ಪರೀಕ್ಷಾ ವಿಭಾಗದ ಅಧಿಕಾರಿಗಳಿಗೊಂದಿಗೆ ಮಾತುಕತೆ ನಡೆಸಿ, ಶೈಕ್ಷಣಿಕ ಆಡಳಿತದ ಸೂಕ್ತ ನಿರ್ವಹಣೆಗೆ ಒತ್ತಾಯಿಸಿ ಮನವಿ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News