Instagram ನಲ್ಲಿ ಸುಶ್ಮಿತಾ ಸೇನ್ ಹೆಸರು ಡಿಲೀಟ್ ಮಾಡಿದ ಲಲಿತ್ ಮೋದಿ!

Update: 2022-09-06 11:11 GMT
ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ (Photo: twitter)

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಸಂಸ್ಥಾಪಕ ಲಲಿತ್ ಮೋದಿ (Lalit modi) ಅವರು ನಟಿ ಸುಶ್ಮಿತಾ ಸೇನ್ ಅವರೊಂದಿಗಿನ ತಮ್ಮ Instagram ಪ್ರೊಫೈಲ್ ಚಿತ್ರವನ್ನು ಬದಲಾಯಿಸಿದ್ದಾರೆ. ಸೇನ್  ಹೆಸರನ್ನು ತೆಗೆದುಹಾಕಲು ತನ್ನ ಬಯೋವನ್ನು ಕೂಡ ಬದಲಾಯಿಸಿದ್ದಾರೆ. ಎರಡು ತಿಂಗಳ ಹಿಂದೆ ಸಾರ್ವಜನಿಕವಾಗಿ ಸೇನ್ ನೊಂದಿಗಿನ ಸಂಬಂಧವನ್ನು ಬಹಿರಂಗಪಡಿಸಿದ್ದ ಮೋದಿ ಇದೀಗ ಆ ಸಂಬಂಧ ಕೊನೆಗೊಳಿಸಿದ್ದಾರೆಯೇ  ಎಂಬ ವದಂತಿಗಳನ್ನು ಹುಟ್ಟುಹಾಕಿದ್ದಾರೆ.

ಐಪಿಎಲ್‌ನ ಮೊದಲ ಅಧ್ಯಕ್ಷರಾದ ಮೋದಿ ಅವರು ಜುಲೈನಲ್ಲಿ ಮೊದಲ ಬಾರಿಗೆ ಮಾಜಿ ವಿಶ್ವ ಸುಂದರಿ ಜೊತೆಗಿನ ತನ್ನ ಸಂಬಂಧದ ಬಗ್ಗೆ ಮಾತನಾಡಿದ್ದರು ಹಾಗೂ ಮಾಲ್ಡೀವ್ಸ್‌ನಿಂದ ತಮ್ಮ ರಜೆಯ ಛಾಯಾಚಿತ್ರಗಳನ್ನು ಹಂಚಿಕೊಂಡರು.

ಸ್ವಲ್ಪ ಸಮಯದ ನಂತರ ಅವರು ಫೋಟೋ ಹಂಚಿಕೆ ಅಪ್ಲಿಕೇಶನ್‌ನಲ್ಲಿ ಸೇನ್ ಅವರೊಂದಿಗಿನ ತನ್ನ ಫೋಟೋವನ್ನು ಪ್ರೊಫೈಲ್ ಚಿತ್ರವಾಗಿ ಹಾಕಿದರು.: "ಸಂಸ್ಥಾಪಕ @iplt20 ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮವಾಗಿ ನನ್ನ ಪಾಲುದಾರರೊಂದಿಗೆ ಹೊಸ ಜೀವನವನ್ನು ಆರಂಭಿಸುತ್ತಿದ್ದೇನೆ. ನನ್ನ ಪ್ರೀತಿಯ @sushmitasen47 (sic) ಎಂದು ಬರೆದುಕೊಂಡಿದ್ದರು.

ಆದಾಗ್ಯೂ, ಮಂಗಳವಾರ ಬೆಳಿಗ್ಗೆ ಅವರ Instagram ಪ್ರೊಫೈಲ್ ವಿಭಿನ್ನ ಪ್ರೊಫೈಲ್ ಚಿತ್ರವನ್ನು ಹೊಂದಿತ್ತು. ಸೇನ್ ಅವರ ಹೆಸರನ್ನು ಬಯೋದಲ್ಲಿ ಉಲ್ಲೇಖಿಸಲಾಗಿಲ್ಲ. "ಸಂಸ್ಥಾಪಕ @iplt20 ಇಂಡಿಯನ್ ಪ್ರೀಮಿಯರ್ ಲೀಗ್ - ಮೂನ್ (sic)," ಎಂದು ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News