ತಲಪಾಡಿ: ಕಾಂಗ್ರೆಸ್ ತಿರಂಗಾ ಯಾತ್ರೆಗೆ ಚಾಲನೆ
Update: 2022-09-06 13:29 IST
ಉಳ್ಳಾಲ: ಸ್ವಾತಂತ್ಯ ಅಮೃತ ಮಹೋತ್ಸವ ಪ್ರಯುಕ್ತ ಮಂಗಳವಾರ ಕಲ್ಲಾಪುವಿನಿಂದ ಮುಡಿಪುವಿನ ತನಕ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯಲಿರುವ ಐಕ್ಯತಾ ತಿರಂಗಾ ಯಾತ್ರೆ ಪ್ರಯುಕ್ತ ಪೂರ್ವ ಭಾವಿಯಾಗಿ ತಲಪಾಡಿ ವಲಯ ಕಾಂಗ್ರೆಸ್ ವತಿಯಿಂದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಸಿದ್ದೀಕ್ ತಲಪಾಡಿ ನೇತೃತ್ವದಲ್ಲಿ ಕೆಸಿರೋಡ್ ನಲ್ಲಿ ತಿರಂಗಾ ಯಾತ್ರೆಗೆ ಚಾಲನೆ ಮಂಗಳವಾರ ನೀಡಲಾಯಿತು
ತಲಪಾಡಿ ವಲಯ ಅಧ್ಯಕ್ಷ ಪಿ ಎಟಿ ಖಾದರ್ ರವರು ಕಾಂಗ್ರೆಸ್ ಮುಖಂಡ ಸತ್ತಾರ್ ಅವರಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿದರು.
ತಲಪಾಡಿಯಿಂದ ಕಲ್ಲಾಪುವರೆಗೆ ತಲಪಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆ ನಡೆಸಿದರು.
ಸಿದ್ದೀಕ್ ತಲಪಾಡಿ, ಇಬ್ರಾಹಿಂ, ವೈಭವ ಶೆಟ್ಟಿ, ವಿನುತ ಶೆಟ್ಟಿ, ಇಸ್ಮಾಯಿಲ್ ತಲಪಾಡಿ, ಸತ್ತಾರ್, ಹಸೈನಾರ್, ಸಲಾಂ, ಜಯಂತ್ ಪಕ್ಕಳ, ಲತಾ ವಿಶ್ವನಾಥ, ಗೋಪಾಲ ಟಚಾನಿ, ಶಬೀರ್ , ಸಲಾಂ ಪಿಲಿಕೂರು ಸಹಿತ ಹಲವರು ಭಾಗವಹಿಸಿದ್ದರು.