ಸಾಮರಸ್ಯ ಬೆಳೆಸುವುದು ತಿರಂಗಾ ಯಾತ್ರೆ ಗುರಿ: ಶಾಸಕ ಯು.ಟಿ. ಖಾದರ್

Update: 2022-09-07 12:44 GMT

ಉಳ್ಳಾಲ‌: ಸ್ವಾತಂತ್ಯ ಅಮೃತ ಮಹೋತ್ಸವ ಪ್ರಯುಕ್ತ ಕಲ್ಲಾಪುವಿನಿಂದ ಮುಡಿಪುವಿನ ತನಕ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುವ ಐಕ್ಯತಾ ತಿರಂಗಾ ಯಾತ್ರೆಗೆ ಮಂಗಳವಾರ ಕಲ್ಲಾಪುವಿನಲ್ಲಿ ಚಾಲನೆ ನೀಡಲಾಯಿತು.

ಐಕ್ಯತಾ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಯು.ಟಿ. ಖಾದರ್, "ಶಾಂತಿ ಸಾಮರಸ್ಯ ಬೆಳೆಸುವ ನಿಟ್ಟಿನಲ್ಲಿ ಈ ಯಾತ್ರೆ ಕೈಗೊಳ್ಳಲಾಗಿದೆ. ಎಲ್ಲರೂ ರಾಷ್ಟ್ರ ಧ್ವಜಕ್ಕೆ ಗೌರವ ನೀಡಿ ಯಾತ್ರೆ ನಡೆಸಬೇಕು. ಇದು ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಕೂಡಾ ಹೌದು. ನಮ್ಮದು ಜನಪರ ಹೋರಾಟ. ಶಾಂತಿ, ಸಾಮರಸ್ಯ ಎಲ್ಲೆಡೆ ಬೆಳೆಯಬೇಕು. ಇದಕ್ಕೆ ನಗರಸಭೆಯಿಂದ ಹಿಡಿದು ಗ್ರಾಮ ಮಟ್ಟದವರೆಗಿನ ಪಕ್ಷದ ಕಾರ್ಯಕರ್ತರ ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಇರಾ ವಲಯ ಕಾಂಗ್ರೆಸ್‌ ಅಧ್ಯಕ್ಷ ಅಶ್ರಫ್‌ ಸಂಪಿಲ, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಅಬ್ದುಲ್ ರಝಾಕ್ ಕುಕ್ಕಾಜೆ, ಟಿಎಸ್ ಅಬ್ದುಲ್ಲಾ, ಚಂದ್ರಹಾಸ್ ಕರ್ಕೆರಾ, ಮುಸ್ತಫಾ ಉಳ್ಳಾಲ, ಮುಸ್ತಫಾ ಪಾವೂರು,, ಫಾರೂಕ್ ಉಳ್ಳಾಲ್, ದಿನೇಶ್ ರೈ, ಸಿದ್ದೀಕ್ ತಲಪಾಡಿ, ದಿನೇಶ್ ಕುಂಪಲ, ಮಮತಾ ಗಟ್ಟಿ, ಬಾಝಿಲ್ ಡಿಸೋಜ, ಮುಹಮ್ಮದ್ ಮುಕಚೇರಿ, ಸಿರಾಜ್ ಕಿನ್ಯ, ನಾಸೀರ್ ಅಹ್ಮದ್ ಸಾಮಣಿಗೆ, ಮುಹಮ್ಮದ್ ಬೋಳಿಯಾರ್, ಹಮೀದ್ ಕಿನ್ಯ, ಸುದರ್ಶನ ಶೆಟ್ಟಿ, ಸುರೇಶ್ ಭಟ್ನಗರ್, ರಹ್ಮಾನ್ ಕೋಡಿಜಾಲ್  ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News