ತನ್ನ ಪತ್ನಿ ಹಲ್ಲೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ಜಾರ್ಖಂಡ್ ಪೊಲೀಸ್ ಅಧಿಕಾರಿ
ರಾಂಚಿ: ಜಾರ್ಖಂಡ್ ಪೊಲೀಸ್‌ನಲ್ಲಿ ಡಿಎಸ್‌ಪಿ ದರ್ಜೆಯ ಅಧಿಕಾರಿಯಾಗಿರುವ ಕಿಶೋರ್ ಕುಮಾರ್ ರಜಾಕ್ ಅವರು ತಮ್ಮ ಪತ್ನಿ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಆಕೆ ತನಗೆ ನಿರಂತರವಾಗಿ ಕಿರುಕುಳ ನೀಡುತ್ತಾಳೆ ಎಂದು ಆರೋಪಿಸಿದ್ದಾರೆ.
ಅವರ ಪತ್ನಿಯನ್ನು ವರ್ಷಾ ಶ್ರೀವಾಸ್ತವ ಎಂದು ಗುರುತಿಸಲಾಗಿದೆ, ಆಕೆ ತನ್ನ ಪತಿ ಕುಮಾರ್ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಲ್ಲದೆ, ಪತಿಯೇ ತನ್ನ ಮೇಲೆ ಹಲ್ಲೆ ನಡೆಸುತ್ತಿರುವುದಾಗಿ ಆರೋಪಿಸಿ ಮನೆಯಿಂದ ಹೊರಗೆ ಓಡಿ ಹೋಗುತ್ತಿರುವುದೂ ಕ್ಯಾಮರಾದಲ್ಲಿ ಸೆರೆಯಾಗಿದೆ.
ಜಾರ್ಖಂಡ್ ಪೊಲೀಸ್‌ನಲ್ಲಿ 2016 ರ ಬ್ಯಾಚ್ ಅಧಿಕಾರಿಯಾಗಿರುವ ಕುಮಾರ್ ಅವರು ತಮ್ಮ ಪತ್ನಿಯಿಂದ ಹಲ್ಲೆಗೊಳಗಾದ ಘಟನೆಯನ್ನು ವಿವರಿಸುವ ಸರಣಿ ಟ್ವೀಟ್‌ಗಳ ಜೊತೆಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಈ ನಡುವೆ, ಕುಮಾರ್ ವಿರುದ್ಧ ರಾಮಗಢ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ ಅವರ ಪತ್ನಿ, ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವರ್ಷಾ ಹಾಗೂ ತನ್ನ ಮದುವೆಯೇ ಬ್ಲ್ಯಾಕ್ ಮೇಲ್ ಮೂಲಕ ನಡೆದಿದೆ ಎಂಬ ಆರೋಪವನ್ನು ಕೂಡಾ ಪೊಲೀಸ್ ಅಧಿಕಾರಿ ಕುಮಾರ್ ಮಾಡಿದ್ದಾರೆ. ತನ್ನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸುವ ಬೆದರಿಕೆ ಒಡ್ಡಿ ತನ್ನನ್ನು ಮದುವೆಯಾಗಿದ್ದರಿಂದ ನಮ್ಮ ಮದುವೆಯು "ಆಕಸ್ಮಿಕವಾಗಿದೆ" ಎಂದು ಕುಮಾರ್ ಹೇಳಿದ್ದಾರೆ.
"ನನ್ನ ಪತ್ನಿ ಇದುವರೆಗೆ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಕನಿಷ್ಠ ಆರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ" ಎಂದು ಕುಮಾರ್ ತಮ್ಮ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.
दिनांक 03/09/22 को पत्नी द्वारा अचानक मुझपर हिंसक हमला किया गया और मुझे लहुलौहान कर दी और घर से भाग गई जिसकी पूरी वीडियो रिकॉर्डिंग मौजूद है। पत्नी के भागने के बाद मुझपर उल्टा मारपीट का आरोप न लगे इसलिए मैने बंगले के तीनो दरवाजा अंदर से बन्द कर दिया और सभी दरवाजा तब खोला जब एक pic.twitter.com/iM9yUKYGVD
— Kishore Kumar Rajak (@dspkishor) September 5, 2022
DSP, एक इंस्पेक्टर और एक दर्जन सब-इंस्पेक्टर अधिकारी आवास में पहुंचे।पत्नी ने भी तीन लाइव विडियो बनाई जिसमे वह मुझे दरवाजा खोलने बोल रही थी।इसके उपरांत उक्त सभी अधिकारी आवास में ही मौजूद थे और पूछताछ जारी था की पत्नी अचानक आवास से गायब हो गई। बाद में पता चला कि पत्नी मुझपर उल्टा
— Kishore Kumar Rajak (@dspkishor) September 5, 2022