×
Ad

ಸೆ.9ರಂದು ಆತ್ಮಹತ್ಯೆ ವಿಷಯದ ಕುರಿತು ಪತ್ರಕರ್ತರಿಗೆ ಕಾರ್ಯಾಗಾರ

Update: 2022-09-07 19:35 IST
ಸಾಂದರ್ಭಿಕ ಚಿತ್ರ

ಉಡುಪಿ, ಸೆ.7: ಭಾರತೀಯ ಮನೋವೈದ್ಯರ ಸೊಸೈಟಿ ಕರ್ನಾಟಕ ಶಾಖೆ ಮತ್ತು ಉಡುಪಿ ಹಾಗೂ ಮಂಗಳೂರು ಮನೋವೈದ್ಯರ ಸೊಸೈಟಿಯ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಹಾಗೂ ಮಾಧ್ಯಮ ವಿದ್ಯಾರ್ಥಿಗಳಿಗೆ ಆತ್ಮಹತ್ಯೆಗೆ ಕಾರಣ, ಮಾನಸಿಕ ಅಂಶಗಳು, ಆರ್ಥಿಕ ಮತ್ತು ಸಾಮಾಜಿಕ ಕಾರಣ, ಆತ್ಮಹತ್ಯೆಯ ಪತ್ರಿಕಾ ವರದಿ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನು ಸೆ.9ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ನಗರದ ಅಜ್ಜರಕಾಡಿನಲ್ಲಿರುವ ಐಎಂಎ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ನಾಡಿನ ಹಿರಿಯ ಮನೋರೋಗ ತಜ್ಡರಾದ ಡಾ.ಪಿ.ವಿ. ಭಂಡಾರಿ, ಡಾ.ಪಿ.ಕೆ.ಕಿರಣಕುಮಾರ್, ಡಾ.ದೀಪಕ್ ಮಲ್ಯ ಹಾಗೂ ರಾಜಾರಾಮ ತಲ್ಲೂರು ಆತ್ಮಹತ್ಯೆಯ ವಿವಿಧ ಮಗ್ಗಲುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದರಲ್ಲಿ ಜಿಲ್ಲೆಯ ಎಲ್ಲಾ ಪತ್ರಕರ್ತರು ಭಾಗವಹಿಸುವಂತೆ ಸಂಘದ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News