×
Ad

ಬೆಳ್ತಂಗಡಿ; ಕಡತ ದುರುಪಯೋಗ ಪ್ರಕರಣ: ಗ್ರಾಮಕರಣಿಕ ಜಯಚಂದ್ರ ಬಂಧನ

Update: 2022-09-07 20:16 IST
ಜಯಚಂದ್ರ

ಬೆಳ್ತಂಗಡಿ, ಸೆ. 7: ಕಂದಾಯ ಇಲಾಖೆಯ ದಾಖಲೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಕರಣಿಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಬುಧವಾರ ವರದಿಯಾಗಿದೆ.

ಬೆಳ್ತಂಗಡಿ ಹೋಬಳಿ ವ್ಯಾಪ್ತಿಗೆ ಒಳಪಟ್ಟ ತಣ್ಣೀರುಪಂತ, ಪುತ್ತಿಲ, ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕ ಜಯಚಂದ್ರ ಬಂಧನಕೊಳಗಾಗಿದ್ದು, ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ 2018ರಲ್ಲಿ ಕೊಕ್ಕಡ ಹೋಬಳಿಯ ಎನ್‌ಸಿಆರ್ ಪೈಲ್‌ಗಳ ಕೇಸ್ ವರ್ಕರ್ ಆಗಿದ್ದ ಜಯಚಂದ್ರ ಪಿ.ಎನ್, ಇನ್ನೋರ್ವ ಆರೋಪಿ ರಾಜು ಎಂಬಾತನೊಂದಿಗೆ ಸೇರಿ ಅಕ್ರಮ ಲಾಭಗಳಿಸುವ ಉದ್ದೇಶದಿಂದ  ಸರಕಾರಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ತಾಲೂಕು ಕಚೇರಿಗೆ ಸಾರ್ವಜನಿಕರಿಂದ ಬಂದ ಎನ್‌ಸಿಆರ್ ಪೈಲ್‌ಗಳನ್ನು ಅಲ್ಲಿಂದ ತೆಗೆದು ರಾಜು ಎಂಬಾತನಿಗೆ ನೀಡಿ, ಆ ಪೈಲ್‌ಗಳನ್ನು ಆತ ತನ್ನ ವಶದಲ್ಲಿ ಇಟ್ಟುಕೊಂಡು ಆರೋಪಿಗಳು ಸಾರ್ವಜನಿಕರಿಗೆ ವಂಚನೆ ಹಾಗೂ ನಂಬಿಕೆಗೆ ದ್ರೋಹ ಎಸಗಿರುವ ಬಗ್ಗೆ ಆ.16 ರಂದು ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು.

ಸೆ.7ರಂದು ಜಯಚಂದ್ರನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News