×
Ad

ಸೋಲಾರ್ ತಂತ್ರಜ್ಞರ ತರಬೇತಿಗೆ ಅರ್ಜಿ ಆಹ್ವಾನ

Update: 2022-09-07 20:36 IST

ಮಣಿಪಾಲ, ಸೆ.7: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ನವೀಕರಿಸ ಬಹುದಾದ ಇಂಧನವಾದ ಸೌರಶಕ್ತಿ ಯಲ್ಲಿ ದೇಶದಾದ್ಯಂತ ತರಬೇತಿ  ಕಾರ್ಯಕ್ರಮಗಳನ್ನು ದಶಕಗಳಿಂದ ನಡೆಸುತ್ತಿದ್ದು,   ಇದೀಗ ರಾಜ್ಯ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಮಾರ್ಗದರ್ಶನದಲ್ಲಿ 60 ದಿನಗಳ ಸೌರಶಕ್ತಿ ತಾಂತ್ರಿಕತೆ ಮತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮವನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ   ಆಯೋಜಿಸಿದೆ.

ಈ ತರಬೇತಿ ಕಾರ್ಯಾಗಾರ ಸೆಪ್ಟಂಬರ್ ಮೂರನೇ ವಾರದಲ್ಲಿ ನಡೆಯಲಿದೆ.   ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದವರಿಗೆ ರಾಜ್ಯ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯು ಪ್ರಮಾಣ ಪತ್ರ ನೀಡಲಿದ್ದು, ಸೌರ ಕ್ಷೇತ್ರದಲ್ಲಿ ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕೆ ಉತ್ತಮ ಅವಕಾಶವಿದೆ.  ಈ ತರಬೇತಿಯು ಸಂಪೂರ್ಣಉಚಿತವಾಗಿದ್ದು ಕೇವಲ ೩೦ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. ಅರ್ಜಿ ಸಲ್ಲಿಸಲು ಸೆ.೧೫ ಕೊನೆಯ ದಿನವಾಗಿರುತ್ತದೆ.  

೧೮ರಿಂದ ೪೦ರ ವಯೋಮಾನದೊಳಗಿನ ಎಸೆಸೆಲ್ಸಿ, ಐಟಿಐ ಹಾಗೂ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಭಾರತೀಯ ವಿಕಾಸ ಟ್ರಸ್ಟ್, ಅಂಬಾಗಿಲು, ಮಣಿಪಾಲ, ಉಡುಪಿ-೫೭೬೧೦೨, ಮೊಬೈಲ್ ಸಂಖ್ಯೆ: 8050822251ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News