×
Ad

ಬಾಹ್ಯಾಕಾಶದ `ದೈತ್ಯ ಜೇಡರ ಹುಳ'ದ ಚಿತ್ರ ಸೆರೆಹಿಡಿದ ಜೇಮ್ಸ್‍ವೆಬ್ ದೂರದರ್ಶಕ

Update: 2022-09-07 22:05 IST
pfoto : india n express 

ವಾಷಿಂಗ್ಟನ್, ಸೆ.7: ನಾಸಾದ ಬಲಿಷ್ಟ ಜೇಮ್ಸ್‍ವೆಬ್ ದೂರದರ್ಶಕವು ಬಾಹ್ಯಾಕಾಶದ `ದೈತ್ಯ ಜೇಡರಹುಳದ' ಆಕರ್ಷಕ ಚಿತ್ರವನ್ನು ಸೆರೆಹಿಡಿದಿದೆ ಎಂದು ವರದಿಯಾಗಿದೆ.

ಭೂಮಿಯಿಂದ 1,61,000 ಜ್ಯೋತಿವರ್ಷದಷ್ಟು ದೂರ ಇರುವ ದೊಡ್ಡ ನಕ್ಷತ್ರಪುಂಜದಲ್ಲಿರುವ 30 ಅತ್ಯಂತ ಬೃಹತ್ ಮತ್ತು ಪ್ರಕಾಶಮಾನದ ನಕ್ಷತ್ರಗಳ ಗುಂಪಿಗೆ ಬಾಹ್ಯಾಕಾಶದ `ದೈತ್ಯ ಜೇಡರಹುಳ' ಎಂಬ ಅಡ್ಡಹೆಸರಿದೆ. ಇದು ನಮ್ಮ ಕ್ಷೀರಪಥ(ಆಕಾಶಗಂಗೆ)ಕ್ಕೆ ಅತ್ಯಂತ ಸನಿಹದ ನಕ್ಷತ್ರ ಪುಂಜ ಇದಾಗಿದೆ ಎಂದು ನಾಸಾದ ಪ್ರಯೋಗಾಲಯದ ಹೇಳಿಕೆ ತಿಳಿಸಿದೆ.

ನೀಹಾರಿಕೆಯಲ್ಲಿರುವ , ಹೊಸ ಮತ್ತು ಈ ಹಿಂದೆಂದೂ ಕಾಣಸಿಗದ ಯುವ ನಕ್ಷತ್ರಗಳತ್ತ ಒಂದು ಕ್ಷಣ ದೃಷ್ಟಿ ಹಾಯಿಸಿ. ನಾಸಾದ ಜೇಮ್ಸ್‍ವೆಬ್ ದೂರದರ್ಶಕವು ನೀಹಾರಿಕೆಯ ರಚನೆ ಮತ್ತು ಸಂಯೋಜನೆಯ ವಿವರ ಹಾಗೂ ಹಿನ್ನೆಲೆಯಲ್ಲಿ ಡಜನ್‍ಗಟ್ಟಲೆ ನಕ್ಷತ್ರಪುಂಜಗಳನ್ನು ಸೆರೆಹಿಡಿದಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಇನ್‍ಸ್ಟಾಗ್ರಾಮ್‍ನಲ್ಲಿ ಆಕರ್ಷಕ ಫೋಟೋ ಸಹಿತ ಪೋಸ್ಟ್ ಮಾಡಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News