ಬ್ರಿಟನ್‌ ರಾಣಿ ಎಲಿಝಬೆತ್ ಆರೋಗ್ಯ ಸ್ಥಿತಿ ಗಂಭೀರ; ವರದಿ

Update: 2022-09-08 14:24 GMT
ಬ್ರಿಟನ್‌ ರಾಣಿ ಎಲಿಝಬೆತ್ (File Photo: AP/PTI)

ಲಂಡನ್: ಬ್ರಿಟನ್‌ ರಾಣಿ(Britain's Queen) ಎಲಿಝಬೆತ್ II(Queen Elizabeth) ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಎಲಿಝಬೆತ್‌ ರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ಗುರುವಾರ ತಿಳಿಸಿದೆ.

"ಇಂದು ಬೆಳಿಗ್ಗೆ ಹೆಚ್ಚಿನ ಪರೀಕ್ಷೆಯ ಬಳಿಕ, ರಾಣಿಯ ವೈದ್ಯರು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಅವರು ವೈದ್ಯಕೀಯ ನಿಗಾದಲ್ಲಿ ಉಳಿಯಲು ಶಿಫಾರಸು ಮಾಡಿದ್ದಾರೆ" ಎಂದು ಬಕಿಂಗ್ಹ್ಯಾಮ್ ಅರಮನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

96 ವರ್ಷ ಪ್ರಾಯವಾಗಿರುವ ಎಲಿಝಬೆತ್ ರನ್ನು ನೋಡಲು ಅವರ ಹಿರಿಯ ಮಗ ಮತ್ತು ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಅವರು ರಾಣಿ ಎಲಿಝಬೆತ್ ತಂಗಿರುವ ಅರಮನೆಗೆ ಆಗಮಿಸಿದ್ದಾರೆ.

ಬ್ರಿಟನ್ ಪ್ರಧಾನಿ ಲಿಝ್ ಟ್ರಸ್ ಅವರು, ರಾಣಿಯ ಆರೋಗ್ಯದ ಬಗ್ಗೆ ಬಕಿಂಗ್ಹ್ಯಾಮ್ ಅರಮನೆಯಿಂದ ಬಂದ ಸುದ್ದಿಯಿಂದ ಇಡೀ ದೇಶವು ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News