ಸೆ.11: ‘ಸೌಹಾರ್ದ ಸಂಗೀತ ರಸಮಂಜರಿ’ ಕಾರ್ಯಕ್ರಮ
ಮಂಗಳೂರು, ಸೆ.8: ಜಿಲ್ಲೆಯಲ್ಲಿ ಸೌಹಾರ್ದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಖ್ಯಾತ ಗಾಯಕರ ಸಮಾಗಮದೊಂದಿಗೆ ಸೆ.11ರಂದು ಸಂಜೆ 6ಕ್ಕೆ ‘ಸೌಹಾರ್ದ ಸಂಗೀತ ರಸಮಂಜರಿ’ ಕಾರ್ಯಕ್ರಮವು ನಗರದ ಪುರಭವನದಲ್ಲಿ ನಡೆಯಲಿದೆ.
ದಿ.ಮುಹಮ್ಮದ್ ರಫಿಯ ಕಂಠದಲ್ಲಿ ಹಾಡುವ ಖಾಲಿದ್ ಅಖ್ತರ್, ದಿ.ಕಿಶೋರ್ ಕುಮಾರ್‌ರ ಕಂಠದಲ್ಲಿ ಹಾಡುವ ಚಲನ ಚಿತ್ರ ಗಾಯಕ ಮುಹಮ್ಮದ್ ಇಕ್ಬಾಲ್, ದಿ.ಮುಕೇಶ್‌ರ ಕಂಠದಲ್ಲಿ ಹಾಡುವ ಕಾರ್ಪೊರೇಟರ್ ಜಗದೀಶ್ ಶೆಟ್ಟಿ, ದಿ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕಂಠದಲ್ಲಿ ಹಾಡುವ ಚಲನಚಿತ್ರ ಗಾಯಕ ರವೀಂದ್ರ ಪ್ರಭು, ಲಯಬದ್ಧ ಹಾಡುಗಾರ ಫಯಾಝ್ ಜೊತೆಗೆ ಜಿಲ್ಲೆಯ ಖ್ಯಾತ ಗಾಯಕಿಯರಾದ ಮಾಲಿನಿ ಕೇಶವ್ ಪ್ರಸಾದ್, ವಿದ್ಯಾ ಅವರ ಭಾಗವಹಿಸಲಿದ್ದಾರೆ.
ಈ ಸಂದರ್ಭ ವಿಜಯ್ ಕೋಕಿಲ, ವಾಲ್ಟರ್ ನಂದಳಿಕೆ, ಶ್ಯಾಡ್ಸ್ ನೌಶಾದ್ ಅವರನ್ನು ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಲ್ಲಿ ಉಳಿದ ಮೊತ್ತವನ್ನು ವಿಶೇಷ ಸಾಮರ್ಥ್ಯದ ಮಕ್ಕಳ ಸಂಸ್ಥೆಗೆ ದೇಣಿಗೆ ನೀಡಲಾಗುವುದು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.