ಏಶ್ಯಕಪ್ ಪಂದ್ಯ: ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2022-09-08 17:24 GMT
Photo:twitter

  ದುಬೈ, ಸೆ.8: ಮಾಜಿ ನಾಯಕ ವಿರಾಟ್ ಕೊಹ್ಲಿ ಸಿಡಿಸಿದ ಶತಕ ಹಾಗೂ ಭುವನೇಶ್ವರ ಕುಮಾರ್ (5-4) ಅಮೋಘ ಬೌಲಿಂಗ್ ನೆರವಿನಿಂದ ಭಾರತವು ಅಫ್ಘಾನಿಸ್ತಾನದ ವಿರುದ್ಧ ಗುರುವಾರ ನಡೆದ ಏಶ್ಯಕಪ್‌ನ ಕೊನೆಯ ಸೂಪರ್-4 ಟಿ-20 ಪಂದ್ಯದಲ್ಲಿ 101 ರನ್‌ನಿಂದ ಭರ್ಜರಿ ಜಯ ಸಾಧಿಸಿತು.

 ಗೆಲ್ಲಲು 213 ರನ್ ಗುರಿ ಪಡೆದಿದ್ದ ಅಫ್ಘಾನ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 111 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇಬ್ರಾಹೀಂ ಝದ್ರಾನ್ ಔಟಾಗದೆ 64 ರನ್(59 ಎಸೆತ, 4 ಬೌಂಡರಿ, 2 ಸಿ.)ಸರ್ವಾಧಿಕ ಸ್ಕೋರ್ ಗಳಿಸಿದರು.ಆರಂಭಿಕ ಆಟಗಾರರಾದ ಝಝೈ ಹಾಗೂ ಗುರ್ಬಾಝ್ ಸಹಿತ ಮೂವರು ಬ್ಯಾಟರ್‌ಗಳು ಶೂನ್ಯಕ್ಕೆ ಔಟಾದರು.

ಇದೇ ವೇಳೆ ಕೊಹ್ಲಿ ತಾನು ಸುದೀರ್ಘ ಸಮಯದಿಂದ ಎದುರಿಸುತ್ತಿದ್ದ ಅಂತರ್‌ರಾಷ್ಟ್ರೀಯ ಶತಕದ ಬರವನ್ನು ನೀಗಿಸಿಕೊಂಡರು. 2019ರ ನವೆಂಬರ್ ಬಳಿಕ ಕೊಹ್ಲಿ ಸಿಡಿಸಿದ 71ನೇ ಅಂತರ್‌ರಾಷ್ಟ್ರೀಯ ಶತಕ ಹಾಗೂ ಚೊಚ್ಚಲ ಟ್ವೆಂಟಿ-20 ಶತಕ ಇದಾಗಿದೆ. 2010ರ ತನ್ನ ಚೊಚ್ಚಲ ಪಂದ್ಯದಲ್ಲಿ ಔಟಾಗದೆ 94 ರನ್ ಗಳಿಸಿದ್ದು ಅವರ ಗರಿಷ್ಠ ವೈಯಕ್ತಿಕ ಸ್ಕೋರಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News