×
Ad

ದೇರಳಕಟ್ಟೆ; ಡೈಮಂಡ್ ಅವೆನ್ಯೂ ವಸತಿ ಸಮುಚ್ಚಯದ ಕರಪತ್ರ (Brochures) ಬಿಡುಗಡೆ ಕಾರ್ಯಕ್ರಮ

Update: 2022-09-08 23:09 IST

ಉಳ್ಳಾಲ, ಸೆ. 8: ದೇರಳಕಟ್ಟೆ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಡೈಮಂಡ್ ಅವೆನ್ಯೂ ವಸತಿ ಸಮುಚ್ಚಯದ ಕರಪತ್ರ (Brochures) ಬಿಡುಗಡೆ ಕಾರ್ಯಕ್ರಮ ಹೊಟೇಲ್ ಪ್ಲಾಝಾ ಅವೆನ್ಯೂ ದೇರಳಕಟ್ಟೆಯಲ್ಲಿ  ಗುರುವಾರ ನಡೆಯಿತು.

ಮಂಗಳೂರು ವಿಧಾನಸಭಾ ಶಾಸಕ, ವಿಪಕ್ಷ ಉಪ ನಾಯಕರಾದ ಯು.ಟಿ ಖಾದರ್ ಕರಪತ್ರ ಬಿಡುಗಡೆಗೊಳಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಧಾರ್ಮಿಕ ಮುಖಂಡರಾದ ತಬೂಕ್ ದಾರಿಮಿ ದುಆ ಮಾಡಿ ಆಶೀರ್ವಾದಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಹಾಜಿ ಟಿ.ಎಸ್. ಅಬ್ದುಲ್ಲಾ, ಯೂಸುಫ್ ಬಾವ ಬೆಲ್ಮ, ಅಲಿಕುಂಞಿ ಪಾರೆ, ಆಲ್ವಿನ್ ಡಿಸೋಜ, ಸಿರಾಜ್ ಕಿನ್ಯ, ಮುಹಮ್ಮದ್ ಅಸೈ, ರಝಾಕ್ ಕಾನಕೆರೆ, ರಶೀದ್ ಡೈಮಂಡ್, ಹಮೀದ್ ದೇರಳಕಟ್ಟೆ, ರಿಶಾನ್ ಡೈಮಂಡ್, ಇಂಜಿನಿಯರ್ ಜಾರ್ಜ್, ಹರ್ಷವರ್ಧನ್ ಹಾಗು ಇತರರು ಉಪಸ್ಥಿತರಿದ್ದರು.

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಸಾಮಣಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News