ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಹೊಸ ವ್ಯವಸ್ಥೆ : ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ

Update: 2022-09-08 18:32 GMT

ಹೊಸದಿಲ್ಲಿ, ಸೆ. 8: ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಕಾಲದ ಒಂದು ಹಂತದಲ್ಲಿ ನಿಯಂತ್ರಿಸಲು ವ್ಯವಸ್ಥೆಯೊಂದನ್ನು ಪರಿಚಯಿಸಲಾಗುವುದು. ಇದು ಬಳಕೆದಾರರ ಖಾತೆಗಳ ಖಾಯಂ ಅಮಾನತಿನ ಕುರಿತ ಮಾರ್ಗಸೂಚಿಗಳನ್ನು ಕೂಡ ಒಳಗೊಂಡಿರಲಿದೆ ಎಂದು ಕೇಂದ್ರ ಸರಕಾರ ಬುಧವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸುವ ಕೇಂದ್ರ ಸರಕಾರದ ಯೋಜನೆಯ ಕುರಿತು ನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದರು. ಇದಕ್ಕೆ ಕೇಂದ್ರ ಸರಕಾರ ಸಲ್ಲಿಸಿದ್ದ ಅಫಿಡಾವಿಟ್‌ನಲ್ಲಿ ಈ ಪ್ರತಿಕ್ರಿಯೆ ನೀಡಲಾಗಿದೆ. ಸಾಮಾಜಿಕ ಮಾಧ್ಯಮದ ಬಳಕೆದಾರರ ಖಾತೆಗಳನ್ನು ಅಮಾನತುಗೊಳಿಸುವ ವಿರುದ್ಧ ಸಲ್ಲಿಸಲಾದ ಮನವಿಗಳ ಗುಚ್ಚವನ್ನು ವರ್ಮಾ ಅವರು ವಿಚಾರಣೆ ನಡೆಸಿದರು. 

ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 19ರಂದು ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News