ಉಕ್ರೇನ್: ರಶ್ಯ ದಾಳಿಯಲ್ಲಿ ಆಸ್ಪತ್ರೆಗೆ ಹಾನಿ ಹಲವರಿಗೆ ಗಾಯ
Update: 2022-09-09 22:41 IST
ಕೀವ್, ಸೆ.9: ಶುಕ್ರವಾರ ಬೆಳಿಗ್ಗೆ ರಶ್ಯ ನಡೆಸಿದ ವಾಯುದಾಳಿಯಲ್ಲಿ ಉಕ್ರೇನ್‍ನ ಈಶಾನ್ಯದಲ್ಲಿರುವ ಸುಮಿ ಪ್ರದೇಶದ ಆಸ್ಪತ್ರೆಯ ಕಟ್ಟಡಕ್ಕೆ ಹಾನಿಯಾಗಿದ್ದು ಹಲವರು ಗಾಯಗೊಂಡಿರುವುದಾಗಿ ಪ್ರದೇಶದ ಗವರ್ನರ್ ಹೇಳಿದ್ದಾರೆ.
ಉಕ್ರೇನ್‍ನ ಗಡಿಯನ್ನು ದಾಟದೆ ರಶ್ಯ ನಡೆಸಿದ ವಾಯುದಾಳಿ ಇದಾಗಿದೆ. ದಾಳಿಯಿಂದ ಗಡಿಭಾಗದ ಸನಿಹದಲ್ಲಿರುವ ವೆಲಿಕ ಪೈಸರ್ವಿಕ ಜಿಲ್ಲೆಯಲ್ಲಿರುವ ಆಸ್ಪತ್ರೆಯ ಕಟ್ಟಡ ಧ್ವಂಸವಾಗಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಗವರ್ನರ್ ಡಿಮಿಟ್ರೊ ಝಿವಿಟ್ಸ್ಕಿ ಹೇಳಿದ್ದಾರೆ. ಆದರೆ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿರುವುದನ್ನು ರಶ್ಯ ನಿರಾಕರಿಸಿದೆ.