2020ರ ದಿಲ್ಲಿ ಗಲಭೆಗಳ ಪ್ರಕರಣ: ಉಮರ್ ಖಾಲಿದ್ ಜಾಮೀನು ಕುರಿತು ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

Update: 2022-09-09 17:37 GMT
photo : india today 

ಹೊಸದಿಲ್ಲಿ,ಸೆ.9: ದಿಲ್ಲಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರ ಅರ್ಜಿಯನ್ನು ಅಂಗೀಕರಿಸುವ ತನ್ನ ಆದೇಶವನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಕಾಯ್ದಿರಿಸಿದೆ. 2022,ಮಾರ್ಚ್‌ನಲ್ಲಿ ಕಾಕರಡೂಮಾ ನ್ಯಾಯಾಲಯವು ಖಾಲಿದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಗುಂಪು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು 2020,ಸೆ.13ರಂದು ಖಾಲಿದ್‌ರನ್ನು ಬಂಧಿಸಿದ್ದರು. ಧಾರ್ಮಿಕ ಭಾವನೆಗಳನ್ನು ಕದಡಿದ ಆರೋಪವನ್ನು ಖಾಲಿದ್ ವಿರುದ್ಧ ಹೊರಿಸಿರುವ ದಿಲ್ಲಿ ಪೊಲೀಸರು,ಅವರು ಗಲಭೆಗಳಲ್ಲಿ ವ್ಯಾಪಕ ಸಂಚೊಂದರ ಭಾಗವಾಗಿದ್ದರು ಎಂದು ವಾದಿಸಿದ್ದಾರೆ.

ಖಾಲಿದ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News