ಬಂಟ್ವಾಳ; ಡಯಾಲಿಸಿಸ್ ಗೆ ಒಳಗಾದ ಬಡ ರೋಗಿಗಳಿಗೆ ಮಾಸಿಕ ಸಹಾಯಧನ ವಿತರಣೆ ಕಾರ್ಯಕ್ರಮ

Update: 2022-09-10 03:13 GMT

ವಿಟ್ಲ: ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಇದರ ವತಿಯಿಂದ ಡಯಾಲಿಸಿಸ್ ಗೆ ಒಳಗಾದ ತಾಲೂಕಿನ ಬಡ ಕಿಡ್ನಿ ರೋಗಿಗಳಿಗೆ ಮಾಸಿಕ ಸಹಾಯಧನ ವಿತರಣಾ ಕಾರ್ಯಕ್ರಮ ಶುಕ್ರವಾರ ಸಂಜೆ ಗೋಳ್ತಮಜಲು ಹಜಾಜ್ ಸ್ಪೋರ್ಟ್ಸ್ ಕ್ಲಬ್ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಜಿ. ಮುಹಮ್ಮದ್ ಹನೀಫ್ ಹಾಜಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ  ಇವೆರಡು  ಜೀವಾನಾವಶ್ಯಕ ಸಂಗತಿಗಳಾಗಿದ್ದು ಅದನ್ನು ಪಡೆಯುವುದು ಮತ್ತು ಕಾಪಾಡುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ಈ ಎರಡು ಕ್ಷೇತ್ರಗಳಲ್ಲೂ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ವತಿಯಿಂದ   ಜಾಗೃತಿಯ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು ಎಂದ ಅವರು ಡಯಾಲಿಸಿಸ್ ಗೆ ಒಳಗಾದ ತಾಲೂಕಿನ ಬಡ ಕಿಡ್ನಿ ರೋಗಿಗಳಿಗೆ ಮಾಸಿಕ ತಲಾ ರೂ. ಮೂರು ಸಾವಿರ ದಂತೆ ಸಹಾಯಧನ ನೀಡುವ ಯೋಜನೆ ರೂಪಿಸಲಾಗಿದ್ದು ಈಗಾಗಲೇ 23 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಿ.ಸಿ. ರೋಡ್ ಪಾಲಿಕ್ಲಿನಿಕ್ ನ ವೈದ್ಯರಾದ ಡಾ. ಮುಬಶ್ಶಿರ್ ಮಾತನಾಡಿ ಕಿಡ್ನಿ ರೋಗ ಬಂದ ಮೇಲೆ ಪರಿತಪಿಸುವ ಬದಲು ದೈನಂದಿನ ಆಹಾರ ಕ್ರಮ ಮತ್ತು ಜೀವನ ಶೈಲಿಯನ್ನು ಬದಲಾಯಿಸುವ‌ ಮೂಲಕ  ಈ ರೋಗ ಬಾರದಂತೆ ತಡೆಯಬಹುದು  ಎಂದು  ಅಭಿಪ್ರಾಯಪಟ್ಟರು.

ಉದ್ಯಮಿಗಳಾದ ಹಾಜಿ.ಎ.ಆರ್. ಮುಹಮ್ಮದ್ ಅಲಿ ಬಂಟ್ವಾಳ, ಹಾಜಿ. ಬಿ.ಮುಹಮ್ಮದ್ ರಫೀಕ್ ಸುಲ್ತಾನ್ ಕೊಡಾಜೆ, ಬಿ.ಕೆ. ಮುನೀರ್ ಬೈರಿಕಟ್ಟೆ  - ಸೌದಿ ಅರೇಬಿಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೋಟರಿ ಅಬೂಬಕ್ಕರ್ ವಿಟ್ಲ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಮುಖರಾದ ರಫೀಕ್ ಹಾಜಿ ಸುರಿಬೈಲು, ಆಸಿಫ್ ಇಕ್ಬಾಲ್ ಫರಂಗಿಪೇಟೆ,  ಹಾಜಿ. ಬಿ.ಎ. ಮುಹಮ್ಮದ್ ನೀಮಾ ಬಂಟ್ವಾಳ, ರಫೀಕ್ ಹಾಜಿ ಆಲಡ್ಕ, ಪಿ.ಎಂ. ಹಕೀಂ ಪರ್ತಿಪಾಡಿ, ಕೆ.ಎಸ್. ಮುಹಮ್ಮದ್ ಕಡೇಶ್ವಾಲ್ಯ, ಹಕೀಂ ಕಲಾಯಿ, ಶೇಖ್ ರಹ್ಮತ್ತುಲ್ಲಾಹ್ ಕಾವಳಕಟ್ಟೆ, ಬಿ.ಎಂ. ತುಂಬೆ, ಮುಹಮ್ಮದ್ ಇಕ್ಬಾಲ್ ಜೆಟಿಟಿ, ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ, ಪಿ. ಮುಹಮ್ಮದ್ ಪಾಣೆಮಂಗಳೂರು ಮೊದಲಾದವರು ಭಾಗವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಎಂ.ಎಸ್. ಮುಹಮ್ಮದ್ ಸ್ವಾಗತಿಸಿ, ಮುಹಮ್ಮದ್ ಅಶ್ರಫ್ ಕೇಪುಳಗುಡ್ಡೆ - ಕನ್ಯಾನ ದುಆ ನೆರವೇರಿಸಿದರು. ರಶೀದ್ ವಿಟ್ಲ ವಂದಿಸಿ, ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News