ಬ್ರಹ್ಮಶ್ರೀ ನಾರಾಯಣಗುರು ಜಯಂತಿ: ಪಂಚಪವಿತ್ರ ಗಿಡಗಳ ವಿತರಣಾ ಅಭಿಯಾನ
ಉಡುಪಿ, ಸೆ.10: ನಮ್ಮ ಹಿರಿಯರು ಗಿಡಗಳ ಮೂಲಕ ಧಾರ್ಮಿಕ ಭಾವನೆಗಳನ್ನು ಮೂಡಿಸಿದರ ಫಲವಾಗಿ ಇಂದು ಹಲವಾರು ಗಿಡ ಮರಗಳು ಉಳಿಯಲು ಕಾರಣವಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಶನಿವಾರ ಭಾರತೀಯ ಜನೌಷಧಿ ಕೇಂದ್ರ ಅಜ್ಜರಕಾಡು ಮತ್ತು ಜಯಂಟ್ಸ್ ಗ್ರೂಫ್ ಆಫ್ ಬ್ರಹ್ಮಾವರ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯ ಪ್ರಯುಕ್ತ ನಡೆದ ಧಾರ್ಮಿಕ ಕೇಂದ್ರಗಳು, ದೇವಾಲಯ ಗಳಿಗೆ ವಿತರಿಸುವ ಪಂಚ ಪವಿತ್ರ ಗಿಡ ವಿತರಣಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂಧನ ನಾಯಕ್, ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಕೇಂದ್ರ ಸದಸ್ಯ ದಿನಕರ ಅಮೀನ್, ಲಕ್ಮೀಕಾಂತ್ ಬೆಸ್ಕೂರು, ಅಣ್ಣಯ್ಯದಾಸ್, ಶ್ರೀನಾಥ್ ಕೋಟ, ಇಕ್ಬಾಲ್ ಮನ್ನಾ, ಮುಂತಾದವರು ಉಪಸ್ಥಿತರಿದ್ದರು.
ಅಧ್ಯಕ್ಷ ಸುಂದರ ಪೂಜಾರಿ ಮೂಡು ಕುಕ್ಕುಡೆ ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಸುಮಾರು ೫೦ಕ್ಕೂ ಅಧಿಕ ದೇವಸ್ಥಾನಗಳವರು ಹಾಗೂ ಸಾರ್ವಜನಿಕರು ಇದರ ಪ್ರಯೋಜನ ಪಡೆದು ಕೊಂಡರು.