×
Ad

ಸೆ.13ರಂದು ಸುರತ್ಕಲ್ ಟೋಲ್ ಗೇಟ್ ತೆರವಿಗಾಗಿ ಧರಣಿಗೆ ಬೆಂಬಲ: ಮುನೀರ್ ಕಾಟಿಪಳ್ಳ

Update: 2022-09-10 20:34 IST

ಸುರತ್ಕಲ್ : ಟೋಲ್ ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ‌ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಸೆ. 13 ರಂದು ಎನ್ಐಟಿಕೆ ಸಮೀಪ ಇರುವ ಸುರತ್ಕಲ್ ಟೋಲ್ ಗೇಟ್ ಮುಂಭಾಗ ಹಮ್ಮಿಕೊಂಡಿರುವ ಒಂದು ದಿನದ ಸಾಮೂಹಿಕ ಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಟೊಲ್ ಗೇಟ್ ಹೋರಾಟ‌‌ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದ್ದಾರೆ‌.

ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಷಿಯೇಷನ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಮಿತಿಗಳು, ವಿಮಾನ ನಿಲ್ದಾಣ ಟ್ಯಾಕ್ಸಿ ಯೂ‌ನಿಯನ್, ದಲಿತ ಸಂಘರ್ಷ ಸಮಿತಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಸಮಿತಿಗಳು, ಡಿವೈಎಫ್ಐ, ಜಯ ಕರ್ನಾಟಕ, ಜನವಾದಿ ಮಹಿಳಾ ಸಂಘಟನೆ, ನಾಗರಿಕ ಸಮಿತಿ ಸುರತ್ಕಲ್, ಕುಳಾಯಿ, ನಾಗರಿಕ ಹೋರಾಟ ಸಮಿತಿ ಸುರತ್ಕಲ್, ನಾಗರಿಕ ಸಮಿತಿ ಹೆಜಮಾಡಿ, ಉಭಯ ಜಿಲ್ಲೆಗಳ ಬಸ್ಸು ಮಾಲಕರ ಸಂಘಟನೆಗಳು, ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘ, ಸಿಐಟಿಯು ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗಳು, ಕಟ್ಟಡ ಕಾರ್ಮಿಕರ ಸಂಘಟನೆ, ಸಾಮರಸ್ಯ ಮಂಗಳೂರು, ಮುಲ್ಕಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ಪಡುಬಿದ್ರೆ, ಸಿಪಿಐಂ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಸಮಿತಿಗಳು,  ಜಾತ್ಯಾತೀತ ಜನತಾ ದಳ ಯುವ ಘಟಕ, ಸಿಪಿಐ, ಎಐಟಿಯುಸಿ ಸೇರಿದಂತೆ ಹಲವು ಸ್ಥಳೀಯ ಸಂಘಸಂಸ್ಥೆಗಳು ಸಾಮೂಹಿಕ ಧರಣಿಯಲ್ಲಿ ಭಾಗವಹಿಸುವುದಾಗಿ ಘೋಷಿಸಿವೆ ಎಂದು ಮುನೀರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News