ಬೆಳ್ಳಾರೆ : ಪ್ರವೀಣ್ ನೆಟ್ಟಾರು ಕೊಲೆ ಆರೋಪಿಯ ಸಹೋದರನಿಂದ ಕೊಲೆ ಬೆದರಿಕೆ
Update: 2022-09-10 20:45 IST
ಸುಳ್ಯ : ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಶಫೀಕ್ ಬೆಳ್ಳಾರೆಯ ತಮ್ಮ ಸಫ್ರೀದ್ ಎಂಬಾತ ಬೆಳ್ಳಾರೆ ದೇವಿಹೈಟ್ಸ್ ಮ್ಯಾನೇಜರ್, ಸಂಘಪರಿವಾರದ ಕಾರ್ಯಕರ್ತ ಪ್ರಶಾಂತ್ ರೈ ಎಂಬವರಿಗೆ ಫೋನ್ ಕರೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಸಫ್ರೀದ್ ಫೋನ್ ಕರೆ ಮಾಡಿ ಕೊಲ್ಲುವುದಾಗಿಯೂ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಪ್ರಶಾಂತ್ ರೈ ತಿಳಿಸಿದ್ದಾರೆ.
ಪ್ರಶಾಂತ್ ರೈ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾಹಿತಿ ಅರಿತ ಹಿಂದುತ್ವ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಸೇರಿದ್ದಾರೆ.