ಮನೆಗೆ ನುಗ್ಗಿ ಚಿನ್ನಾಭರಣ ಕಳವು
Update: 2022-09-10 21:10 IST
ಉಡುಪಿ, ಸೆ.10: ಕುಂಜಿಬೆಟ್ಟು ಎಲ್‌ಎಲ್‌ಆರ್ ಮಾರ್ಗದಲ್ಲಿರುವ ಮನೆಯೊಂದಕ್ಕೆ ಸೆ.9ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರೂ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸುರಾಲು ನಾರಾಯಣ ಮಡಿ ಎಂಬವರ ಕುಟುಂಬ ಸಮೇತ ನೇಪಾಳಕ್ಕೆ ಪ್ರವಾಸ ಹೋಗಿದ್ದು, ಈ ಸಮಯಲ್ಲಿ ಮನೆಯ ಮುಖ್ಯದ್ವಾರದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು, ದೇವರ ಕೋಣೆಯಲ್ಲಿದ್ದ ಬೆಳ್ಳಿಯ ದೇವರ ಪೀಠ, ಬೆಳ್ಳಿಯ ಸಣ್ಣ ತಟ್ಟೆ, ಬೆಳ್ಳಿಯ ಅರಶಿನ ಕುಂಕುಮ ಬೌಲ್, ಬೆಳ್ಳಿಯ ಸಣ್ಣ ಕುಂಕುಮ ಕರಡಿಗೆ, ಬೆಳ್ಳಿಯ ಗಣಪತಿಯ ಪೀಠ ಸೇರಿ ಒಟ್ಟು 845 ಗ್ರಾಂ ತೂಕದ ಬೆಳ್ಳಿ ಸಾಮಗ್ರಿಗಳು ಮತ್ತು ಸಿಸಿಟಿವಿ ಡಿವಿಆರ್, ವೈಪೈ ರೂಟರ್‌ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಮೌಲ್ಯ 64000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.