ಮಂಗಳೂರು; ಚಿನ್ನ ಅಕ್ರಮ ಸಾಗಾಟ ಜಾಲ ಪತ್ತೆ
Update: 2022-09-10 21:28 IST
ಮಂಗಳೂರು, ಸೆ.10: ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆ.6ರಿಂದ 10ರ ಮಧ್ಯೆ ಬಂದಿಳಿದ ಪ್ರಯಾಣಿಕರ ಪೈಕಿ ಐದು ಮಂದಿ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಜಾಲವೊಂದನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಆರೋಪಿಗಳಿಂದ ಕಾಸರಗೋಡು ಮತ್ತು ಮಂಗಳೂರಿನ ನಾಲ್ಕು ಮಂದಿ ಪುರುಷರು ಹಾಗೂ ಒಬ್ಬ ಮಹಿಳೆಯಿಂದ ಒಟ್ಟು 44,33,780ರೂ. ಮೌಲ್ಯದ 869 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳು ಚಿನ್ನವನ್ನು ಪೇಸ್ಟ್, ಪೌಡರ್ ರೂಪದಲ್ಲಿ ಪ್ಯಾಂಟ್, ಒಳವಸ್ತ್ರ, ಬನಿಯಾನ್, ಶೂ, ಗುದದ್ವಾರಗಳಲ್ಲಿ ಬಚ್ಚಿಟ್ಟು ಸಾಗಿಸಲು ಯತ್ನಿಸಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.