ಕಳೆದ 30 ವರ್ಷಗಳಲ್ಲಿ 1.1 ಮಿಲಿಯನ್ ಗೂ ಅಧಿಕ ಕಡಲಾಮೆಗಳ ಹತ್ಯೆ: ವರದಿ

Update: 2022-09-10 17:06 GMT

ನ್ಯೂಯಾರ್ಕ್, ಸೆ.10: ಕಳೆದ 30 ವರ್ಷಗಳಲ್ಲಿ (1990ರಿಂದ 2020)  1.1 ಮಿಲಿಯನ್ಗೂ ಅಧಿಕ ಕಡಲಾಮೆಗಳನ್ನು ಅಕ್ರಮವಾಗಿ ಬೇಟೆಯಾಡಲಾಗಿದೆ ಮತ್ತು ಇವನ್ನು ಕಳ್ಳಸಾಗಣೆ ಮಾಡುವ ಪ್ರಕರಣಗಳೂ ಬೆಳಕಿಗೆ ಬಂದಿವೆ ಎಂದು ಅಮೆರಿಕದ ಅರಿಝೋನಾ ವಿವಿಯ ವಿಜ್ಞಾನಿಗಳು ಹೇಳಿದ್ದಾರೆ.

ʼಗ್ಲೋಬಲ್ ಚೇಂಜ್ ಬಯಾಲಜಿ'ಯಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಕಳೆದ ದಶಕದಲ್ಲಿ 65 ದೇಶ ಅಥವಾ ಪ್ರಾಂತಗಳಲ್ಲಿ ವಾರ್ಷಿಕವಾಗಿ 44,000ದಷ್ಟು ಕಡಲಾಮೆಗಳನ್ನು ಮತ್ತು ಪ್ರಪಂಚದಾದ್ಯಂತ 58 ಪ್ರಮುಖ ಕಡಲಾಮೆ ತಳಿಗಳಲ್ಲಿ 44ನ್ನು ಹತ್ಯೆ ಮಾಡಲಾಗಿದೆ. ಇವುಗಳನ್ನು ಹಿಡಿಯುವುದು ಅಥವಾ ಬಳಸಿಕೊಳ್ಳುವುದನ್ನು ನಿರ್ಬಂಧಿಸುವ ಕಾಯ್ದೆಯ ಹೊರತಾಗಿಯೂ ಇಂತಹ ಕೃತ್ಯ ನಡೆದಿದೆ. ವಿಶ್ವಸಂಸ್ಥೆಯ ಪ್ರಕಾರ, ಕಡಲಾಮೆಗಳನ್ನು ಮುಖ್ಯವಾಗಿ ಮಾಂಸ ಮತ್ತು ಅದರ ಚಿಪ್ಪಿಗಾಗಿ ಹತ್ಯೆ ಮಾಡಲಾಗುತ್ತಿದೆ. ಅದರ ಭಾಗಗಳನ್ನು ಆಭರಣ ತಯಾರಿ, ಕಲಾಕೃತಿ ಮತ್ತು ಸಾಂಪ್ರದಾಯಿಕ ಔಷಧ ತಯಾರಿಸಲು ಬಳಸಲಾಗುತ್ತದೆ. ಕಡಲಾಮೆಗಳ ಬೇಟೆ ಮತ್ತು ಕಳ್ಳಸಾಗಣೆಯ ಮೂಲಕ ವಾರ್ಷಿಕ 23 ಶತಕೋಟಿ ವ್ಯವಹಾರ ನಡೆಯುತ್ತಿದೆ ಎಂದು `ದಿ ಗಾರ್ಡಿಯನ್' ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News