×
Ad

ಚಾರ್ಮಾಡಿ ಘಾಟ್ ರಸ್ತೆಯ ತಡೆ ಗೋಡೆ ಕುಸಿತ

Update: 2022-09-11 19:16 IST

ಬೆಳ್ತಂಗಡಿ, ಸೆ. 11: ಮಲೆನಾಡು ಭಾಗದಲ್ಲಿ ಮುಂದುವರಿದ ಧಾರಾಕಾರ ಮಳೆಗೆ ಚಾರ್ಮಾಡಿ ಘಾಟ್ ರಸ್ತೆಯ ತಡೆ ಗೋಡೆ ರವಿವಾರ ಕುಸಿದಿದೆ.

ಘಾಟಿಯ ಬಿದ್ರುತಳ ಸಮೀಪ ತಡೆಗೋಡೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದಿದೆ. ಇನ್ನಷ್ಟು ಕುಸಿತವಾದಲ್ಲಿ ರಸ್ತೆಯ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮಳೆ ಮುಂದುವರಿದರೆ ತಡೆಗೋಡೆಯ ಇನ್ನಷ್ಟು ಭಾಗಗಳು ಕುಸಿಯುವ ಅಪಾಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News