ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2022-09-11 20:47 IST
ಬ್ರಹ್ಮಾವರ, ಸೆ.11: ತಲೆನೋವಿನಿಂದ ಬಳಲುತ್ತಿದ್ದ ನಡೂರು ಗ್ರಾಮದ ಇಸೋಳ್ಳಿ ನಿವಾಸಿ ಭುಜಂಗ ಶೆಟ್ಟಿ(63) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.9ರಂದು ರಾತ್ರಿ ಮನೆಯ ಸಮೀಪದ ಗದ್ದೆಯ ಬಾವಿಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದ ಬಡಗುಬೆಟ್ಟು ಗ್ರಾಮದ ದುಗ್ಲಿಪದವು ನಿವಾಸಿ ಶೌಕತ್ ಅಲಿ(53) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಸೆ.10ರಂದು ಮಧ್ಯಾಹ್ನ ಮನೆಯ ಹಾಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.