ಮಂಗಳೂರು: ಜಮೀನು ತಕರಾರು ಹಿನ್ನೆಲೆ; ದಂಪತಿಗೆ ತಂಡದಿಂದ ಕೊಲೆ ಬೆದರಿಕೆ
Update: 2022-09-11 20:56 IST
ಮಂಗಳೂರು, ಸೆ.11: ಜಮೀನು ತಕಾರರಿನ ಹಿನ್ನೆಲೆಯಲ್ಲಿ ತಂಡವೊಂದು ದಂಪತಿಗೆ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಳೂರಿನ ಗುರುಚಂದ್ರ ಹೆಗ್ಡೆ, ಚನ್ನಕೇಶವ, ಪ್ರವೀಣ್, ಗಣೇಶ್ ಎಂಬವರು ಮನೆಯ ಬಳಿ ಬಂದು ತನ್ನ ಪತಿ ಶಾಂತಕುಮಾರ್ ಹಾಗೂ ತನಗೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಾರೆ ಎಂದು ಅನಿತಾ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಜಮೀನು ಖರೀದಿಗೆ ಸಂಬಂಧಿಸಿದಂತೆ ಕೂಳೂರಿನ ಗುರುಚಂದ್ರ ಹೆಗ್ಡೆ ಮತ್ತು ಶಾಂತಕುಮಾರ್ ಮಧ್ಯೆ ತಕರಾರು ಇದ್ದು, ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ವಿಚಾರವಾಗಿ ಆರೋಪಿಗಳು ಜೀವ ಬೆದರಿಕೆ ಒಡ್ಡಿದ್ದು, ಇದರಿಂದ ನಮಗೆ ಆತಂಕ ಕಾಡುತ್ತಿದೆ. ಹಾಗಾಗಿ ಈ ನಾಲ್ವರಿಂದ ರಕ್ಷಣೆ ನೀಡಬೇಕು ಎಂದು ಅನಿತಾ ದೂರಿನಲ್ಲಿ ಮನವಿ ಮಾಡಿದ್ದಾರೆ.