ಇನಾಯತ್ ಅಲಿ ಅಭಿಮಾನಿ ಬಳಗ ಗುರುಪುರ ವಲಯ ಜನಸ್ನೇಹಿ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2022-09-11 15:48 GMT

ಬಜ್ಪೆ, ಸೆ.11: ಇನಾಯತ್ ಅಲಿ ಅಭಿಮಾನಿ ಬಳಗ ಗುರುಪುರ ವಲಯ ವತಿಯಿಂದ ಗಂಜಿಮಠ ಒಂಡೇಲಾ ಹಾಲ್‌ನಲ್ಲಿ ಜನಸ್ನೇಹಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ರವಿವಾರ ನಡೆಯಿತು.

ಇನಾಯತ್ ಅಲಿ ಫೌಂಡೇಶನ್ ಸಹಯೋಗದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯ ಆರೋಗ್ಯ ಕಾರ್ಡ್‌ನ್ನು ಐದು ಸಾವಿರದಷ್ಟು ಜನರಿಗೆ ವಿತರಿಸಲು ಶಿಬಿರದಲ್ಲಿ ವ್ಯವಸ್ಥೆ ಮಾಡಲಾಯಿತು. ಜನರಲ್ ಮೆಡಿಸಿನ್‌, ಇಎನ್‌ಟಿ‌, ಕಣ್ಣಿನ ಪರೀಕ್ಷೆ ಹಾಗೂ ಇತರ ವೈದ್ಯಕೀಯ ತಪಾಸಣೆಗಳು, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ, ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ಇತರ ಸೇವೆಗಳು ಶಿಬಿರದಲ್ಲಿ ನೀಡಲಾಯಿತು.

ಹನ್ನೆರಡು ಮಂದಿ ನಿವೃತ್ತ ಶಿಕ್ಷಕರು ಹಾಗೂ ಹಿರಿಯ ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. 24 ಅತೀ ಬಡ ಕುಟುಂಬಗಳಿಗೆ ಸಹಾಯ ಧನ, ಅಂಗವಿಕಲರಿಗೆ ಪ್ರೋತ್ಸಾಹ ಧನ, ಬಡ ಮಕ್ಕಳಿಗೆ ಉಚಿತ ಶಾಲಾ ಪುಸ್ತಕ ವಿತರಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕದ್ರಿ ಮಂಜುನಾಥ ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಶ್ರೀ ವಿಠ್ಠಲದಾಸ ತಂತ್ರಿಗಳು ಉದ್ಘಾಟಿಸಿದರು.

ಧರ್ಮಗುರುಗಳಾದ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಫಾ. ಅಲ್ಬೆನ್ ರೋಡ್ರಿಗಸ್ ನೀರುಡೆ ಚರ್ಚ್ ಆಶೀರ್ವಚನ ನೀಡಿದರು‌.

ಮುಖ್ಯ ಅತಿಥಿಗಳಾಗಿ ಲಯನ್ಸ್ ಡಾ. ಮೆಲ್ವಿನ್ ಡಿಸೋಜ, ಎಂ.ಜಿ. ಹೆಗ್ಡೆ, ಡಾ. ಸಿದ್ದೀಕ್ ಕೈಕಂಬ, ಚಂದ್ರಹಾಸ ಪೂಜಾರಿ, ಹಾಜಿ ನೌಷಾದ್ ಸೂರಲ್ಪಾಡಿ, ಕೃಷ್ಣ ಅಮೀನ್, ಯು.ಪಿ. ಇಬ್ರಾಹೀಂ, ಗಿರೀಶ್ ಆಳ್ವ, ಲಯನ್ಸ್ ಸ್ಟಾನಿ ಮಿರಾಂಡ, ಲಯನ್ಸ್ ಅಶಿತ್, ಅಭಿಮಾನಿ ಬಳಗದ ಗೌರವಾಧ್ಯಕ್ಷ ಬಾಷಾ ಮಾಸ್ಟರ್, ಅಧ್ಯಕ್ಷ ಹಾಲಿಯಾರ್ ಇಕ್ಬಾಲ್, ಪದಾಧಿಕಾರಿಗಳಾದ ಹರಿಯಪ್ಪ ಮುತ್ತೂರು, ಚಂದ್ರಹಾಸ ಶೆಟ್ಟಿ, ಎಂ.ಎಸ್. ಮೋನು ಅಡ್ಡೂರು, ಮುಹಮ್ಮದ್ ಅಝೀಝ್ ಕುಪ್ಪೆಪದವು, ಸುಕುಮಾರ್ ಅಮೀನ್ ಎಡಪದವು, ದಾಮೋದರ್ ಕುಳಾಲ್, ರಝಾಕ್ ಮಳಲಿ, ಸಂದೀಪ್ ಪೂಪಾಡಿಕಲ್ಲು, ರಾಜೇಶ್ ಕೈಕಂಬ, ಸರ್ಫರಾಝ್ ಮಳಲಿ, ಸಮೀರ್ ಸೂರಲ್ಪಾಡಿ, ಒಝ್ವಾಲ್ಡ್ ಡಿಸೋಜಾ ಹಾಗೂ ಸ್ಥಳೀಯ ಹಿರಿಯ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News