ವೀರ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಟ ಮಾಡಿದ ಮಹಿಳೆ: ಡಾ. ಶೈಲಾ

Update: 2022-09-11 15:58 GMT

ಉಳ್ಳಾಲ : ವೀರ ರಾಣಿ ಅಬ್ಬಕ್ಕ ಮಹಿಳೆಯಾಗಿ ಮಹತ್ಸಾಧನೆ ಮಾಡಿದ್ದಾರೆ. ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಸೆಟೆದು ನಿಂತು ಹೋರಾಟ ಮಾಡಿದ ವೀರ ಮಹಿಳೆಯಾಗಿದ್ದಾರೆ ಎಂದು ವಿವಿ ಉಪನ್ಯಾಸಕಿ ಡಾ. ಶೈಲಾ ಹೇಳಿದರು

ಅವರು ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ, ಹಿರಾ ಮಹಿಳಾ ಪದವಿ ಪೂರ್ವ ಕಾಲೇಜು, ಬಬ್ಬುಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ  ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ವಿಶೇಷ ಉಪನ್ಯಾಸ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಶಾಸಕ ಕೆ ಜಯರಾಂ ಶೆಟ್ಟಿ ಕಾರ್ಯಕ್ರಮವನ್ನು  ಉದ್ಘಾಟಿಸಿದರು. ಜಿ.ಪಂ.ಮಾಜಿ ಸದಸ್ಯೆ ಧನಲಕ್ಷ್ಮಿ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಾ ಕಾಲೇಜು ಅಧ್ಯಕ್ಷ ಎ.ಎಚ್ ಮೆಹಮೂದ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ   ಶಿಕ್ಷಕಿ ಡಾ. ಮೀನಾಕ್ಷಿ ರಾಮಚಂದ್ರ,  ಉಷಾ ರವರನ್ನು ಸನ್ಮಾನಿಸಲಾಯಿತು.
ಹಿರಾ ಕಾಲೇಜು ಸಂಚಾಲಕ ಅಬ್ದುಲ್ ರಹಿಮಾನ್,  ರಹ್ಮತುಲ್ಲಾ ಖಾನ್, ಶಾಂತಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ಕರೀಂ,  ಪ್ರಿನ್ಸಿಪಾಲ್ ಫಾತೀಮಾ, ಸದಾನಂದ ಬಂಗೇರ, ದೇವಕಿ ಉಳ್ಳಾಲ,ಅಬ್ಬಕ ಉತ್ಸವ ಸಮಿತಿ  ಅಧ್ಯಕ್ಷ ದಿನಕರ ಉಳ್ಳಾಲ, ಕೋಶಾಧಿಕಾರಿ ಆನಂದ ಅಸೈಗೋಳಿ ಉಪಸ್ಥಿತರಿದ್ದರು.
ಕೆಎಂಕೆ ಮಂಜನಾಡಿ ಪ್ರಶಸ್ತಿ ಪತ್ರ ವಾಚಿಸಿದರು. ವಾಸುದೇವ ರಾವ್ ಕಾರ್ಯಕ್ರಮ ನಿರೂಪಿಸಿದರು. ಅನುಪಮಾ ಬಬ್ಬುಕಟ್ಟೆ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News