ಯುವಕ ಕಾಣೆ
ಮಂಗಳೂರು, ಸೆ.12: ನಗರದ ಸುಲ್ತಾನ್ ಬತ್ತೇರಿಯ ಪಡುಮನೆ ನಗರದ ನಿವಾಸಿ ಪಾಂಡುರಂಗ ಶೆಣೈ ಎಂಬವರ ಪುತ್ರ ಕೃಷ್ಣ ಶೆಣೈ (23)ಎಂಬಾತ ಸೆ.5ರಿಂದ ಕಾಣೆಯಾದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ 3 ತಿಂಗಳಿನಿಂದ ಮಾಯಾ ಟ್ರೇಡರ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ ಶೆಣೈ ಕೆಲವು ಮಂದಿಯ ಬಳಿ ಸುಮಾರು 2 ಲಕ್ಷ ರೂ. ಸಾಲ ಮಾಡಿದ್ದ. ಅದರ ಪಾವತಿಗಾಗಿ ಬ್ಯಾಂಕೊಂದರಿಂದ ಸಾಲ ಪಡೆದಿದ್ದ. ಸೆ.5ರಂದು ಪೂ.11:30ಕ್ಕೆ ಹಣದೊಂದಿಗೆ ಹೊರಗೆ ಹೋಗಿದ್ದ. ಆದರೆ ಕೆಲಸಕ್ಕೂ ಹೋಗದೆ, ಮನೆಗೂ ಬಾರದೆ ಕಾಣೆಯಾಗಿದ್ದಾನೆ ಎಂದು ಪಾಂಡುರಂಗ ಶೆಣೈ ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವೇಳೆ ಗ್ರೇ ಬಣ್ಣದ ಪ್ಯಾಂಟ್ ಹಾಗೂ ಕೆಂಪು ಬಣ್ಣದ ಅರ್ಧತೋಳಿನ ಟೀಶರ್ಟ್ ಧರಿಸಿರುವ ಕೃಷ್ಣ ಶೆಣೈ ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಕೊಂಕಣಿ, ತುಳು, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಇವರನ್ನು ಕಂಡವರು ದೂ.ಸಂ: 0824- 2220522/ 9480805350ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.