ಪೊಲೀಸ್ ವಸತಿಗೃಹದಲ್ಲಿ ಹೆಬ್ಬಾವು ಪ್ರತ್ಯಕ್ಷ
Update: 2022-09-12 21:16 IST
ಉಡುಪಿ, ಸೆ.12: ಉಡುಪಿ ನಗರದ ಪೊಲೀಸ್ ವಸತಿ ಗೃಹದಲ್ಲಿ ಕಾಣಿಸಿ ಕೊಂಡ ಬೃಹತ್ ಗಾತ್ರದ ಹೆಬ್ಬಾವನ್ನು ಕುಕ್ಕಿಕಟ್ಟೆಯ ಪೌಲ್ ಸಾಲಿನ್ಸ್ ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.
ಕಳೆದ ಮೂರು ನಾಲ್ಕು ದಿನಗಳಿಂದ ಉಡುಪಿ ಮಹಿಳಾ ಠಾಣೆ, ನಗರ ಠಾಣೆ ಹಾಗೂ ವಸತಿ ಗೃಹ ಪರಿಸರದಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು. ಆದರೆ ಹಾವನ್ನು ಹಿಡಿಯಲು ಬಂದಾಗ ಪೊದೆಯಲ್ಲಿ ಅವಿತು ತಪ್ಪಿಸಿಕೊಂಡಿತ್ತು. ನಿನ್ನೆ ರಾತ್ರಿ ಪೊಲೀಸ್ ವಸತಿ ಗೃಹದ ಪಕ್ಕದಲ್ಲಿ ಪೊದೆಯಲ್ಲಿ ಅವಿತಿದ್ದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಡಲಾಗಿದೆ.