ಗಡ್ಡೆ ಚರ್ಮ ರೋಗಕ್ಕೆ ದೇಶದಲ್ಲಿ 67,000 ಕ್ಕೂ ಅಧಿಕ ಜಾನುವಾರು ಬಲಿ: ಕೇಂದ್ರ ಸರ್ಕಾರ

Update: 2022-09-12 16:25 GMT
ಸಾಂದರ್ಭಿಕ ಚಿತ್ರ (TheNewIndianExpress)

ಹೊಸದಿಲ್ಲಿ: ಜುಲೈನಲ್ಲಿ 67,000 ಕ್ಕೂ ಹೆಚ್ಚು ಜಾನುವಾರುಗಳು (lumpy skin disease) ಗಡ್ಡೆ ಚರ್ಮದ ಕಾಯಿಲೆಯಿಂದ ಸಾವನ್ನಪ್ಪಿವೆ ಎಂದು ಕೇಂದ್ರ ಸೋಮವಾರ ಹೇಳಿದೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ  ಹೆಚ್ಚಿನ ಪ್ರಕರಣಗಳನ್ನು ಹೊಂದಿರುವ ಎಂಟು ರಾಜ್ಯಗಳಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುವ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಸರ್ಕಾರದ ಮೂಲ ತಿಳಿಸಿವೆ.


ಪಿಟಿಐ ಜೊತೆ ಮಾತನಾಡಿದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಕಾರ್ಯದರ್ಶಿ ಜತೀಂದ್ರ ನಾಥ್ ಸ್ವೈನ್, ಜಾನುವಾರುಗಳಲ್ಲಿ ಗಡ್ಡೆ ಚರ್ಮ ರೋಗವನ್ನು (ಎಲ್‌ಎಸ್‌ಡಿ) ನಿಯಂತ್ರಿಸಲು ರಾಜ್ಯಗಳು ಪ್ರಸ್ತುತ ʼಗೋಟ್ ಪಾಕ್ಸ್' (goat pox) ಲಸಿಕೆಯನ್ನು ಬಳಸುತ್ತಿವೆ ಎಂದು ಹೇಳಿದ್ದಾರೆ.

ಕೃಷಿ ಸಂಶೋಧನಾ ಸಂಸ್ಥೆ ICAR ನ ಎರಡು ಸಂಸ್ಥೆಗಳು ಅಭಿವೃದ್ಧಿಪಡಿಸಿದ LSD ಗಾಗಿ ಹೊಸ ಲಸಿಕೆ 'Lumpi-ProVacInd' ನ ವಾಣಿಜ್ಯ ಬಿಡುಗಡೆಯು ಮುಂದಿನ "ಮೂರು-ನಾಲ್ಕು ತಿಂಗಳುಗಳ"  ಬಳಿಕ ನಡೆಯಬಹುದು ಎಂದು ಅವರು ಹೇಳಿದರು.

ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮುದ್ದೆ ಚರ್ಮ ರೋಗವು ವ್ಯಾಪಕವಾಗಿ ಹರಡಿದೆ. ಆಂಧ್ರಪ್ರದೇಶ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕೂಡಾ ಕೆಲವು ಪ್ರಕರಣಗಳು ದಾಖಲಾಗಿವೆ.

"ರಾಜಸ್ಥಾನದಲ್ಲಿ,  ಜಾನುವಾರುಗಳ ಸಾವಿನ ಸಂಖ್ಯೆ ದಿನಕ್ಕೆ 600-700 ಆಗಿದೆ. ಆದರೆ ಇತರ ರಾಜ್ಯಗಳಲ್ಲಿ, ಈ ಪ್ರಮಾಣವು 100 ಕ್ಕಿಂತ ಕಡಿಮೆಯಾಗಿದೆ. ಲಸಿಕೆ ಪ್ರಕ್ರಿಯೆಯನ್ನು ವೇಗಗೊಳಿಸಲು ಸಚಿವಾಲಯವು ರಾಜ್ಯಗಳನ್ನು ಕೇಳಿದೆ" ಎಂದು ಅವರು ಹೇಳಿದರು.

ಈ ರೋಗಕ್ಕೆ ಗೋಟ್‌ ಪೋಕ್ಸ್ ಲಸಿಕೆ "100 ಪ್ರತಿಶತ ಪರಿಣಾಮಕಾರಿ" ಮತ್ತು ಈಗಾಗಲೇ 1.5 ಕೋಟಿ ಡೋಸ್‌ಗಳನ್ನು ರೋಗ ಪೀಡಿತ ರಾಜ್ಯಗಳಲ್ಲಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ದೇಶದಲ್ಲಿ ಮೇಕೆ ಪೋಕ್ಸ್ ಲಸಿಕೆ ಸಾಕಷ್ಟು ಪೂರೈಕೆ ಇದೆ ಎಂದು ಅವರು ಹೇಳಿದ್ದಾರೆ.

ಸದ್ಯ, ಎರಡು ಕಂಪನಿಗಳು ಈ ಲಸಿಕೆಯನ್ನು ತಯಾರಿಸುತ್ತಿದ್ದು, ಅವು ತಿಂಗಳಿಗೆ 4 ಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಒಟ್ಟು ಜಾನುವಾರುಗಳ ಸಂಖ್ಯೆ ಸುಮಾರು 20 ಕೋಟಿ ಇದ್ದು, ಈಗಾಗಲೇ 1.5 ಕೋಟಿ ಗೋಟ್‌ ಪಾಕ್ಸ್‌  ಡೋಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News