ಚೀನಾಕ್ಕೆ ಸೆಮಿಕಂಡಕ್ಟರ್ ರಫ್ತಿನ ನಿರ್ಬಂಧ ವಿಸ್ತರಣೆಗೆ ಅಮೆರಿಕ ಚಿಂತನೆ

Update: 2022-09-12 16:43 GMT

ವಾಷಿಂಗ್ಟನ್, ಸೆ.12: ಕೃತಕ ಬುದ್ಧಿಮತ್ತೆ ಮತ್ತು ಚಿಪ್ ತಯಾರಿಕೆ ಉಪಕರಣಗಳಿಗೆ ಬಳಸಲಾಗುವ ಸೆಮಿಕಂಡಕ್ಟರ್‌ಗಳನ್ನು ಚೀನಾಕ್ಕೆ ರಫ್ತು ಮಾಡುವುದರ ಮೇಲಿನ ನಿರ್ಬಂಧಗಳನ್ನು ಇನ್ನಷ್ಟು ವ್ಯಾಪಕಗೊಳಿಸಲು ಬೈಡನ್ ಸರಕಾರ ಯೋಜಿಸಿದೆ ಎಂದು ವರದಿಯಾಗಿದೆ.

ಮಾರಾಟಗಾರರು ವಾಣಿಜ್ಯ ಇಲಾಖೆಯ ಪರವಾನಿಗೆಗಳನ್ನು ಪಡೆಯದ ಹೊರತು ಸಬ್-14 ನ್ಯಾನೊಮೀಟರ್ ಪ್ರಕ್ರಿಯೆಗಳೊಂದಿಗೆ ಸುಧಾರಿತ ಸೆಮಿಕಂಡಕ್ಟರ್ಗಳನ್ನು ಉತ್ಪಾದಿಸುವ ಚೀನಾದ ಕಾರ್ಖಾನೆಗಳಿಗೆ ಚಿಪ್ ತಯಾರಿಕಾ ಉಪಕರಣಗಳನ್ನು ರಫ್ತು ಮಾಡುವುದನ್ನು ನಿಷೇಧಿಸುವ ಉದ್ದೇಶವಿದೆ ಎಂದು ಮೂಲಗಳು ಹೇಳಿವೆ.

ಮಿಲಿಟರಿ ಆಧುನೀಕರಣಕ್ಕೆ ಅನ್ವಯವಾಗುವ ಅಮೆರಿಕ ತಂತ್ರಜ್ಞಾನವನ್ನು ಚೀನಾ ಸ್ವಾಧೀನಪಡಿಸಿಕೊಳ್ಳದಂತೆ ತಡೆಯುವುದು ಸೇರಿದಂತೆ ಹೆಚ್ಚುವರಿ ಕ್ರಮಗಳನ್ನು ಜಾರಿಗೆ ತರಲು, ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಹಿತಾಸಕ್ತಿಗಳನ್ನು ರಕ್ಷಿಸಲು ಸಮಗ್ರ ವಿಧಾನವನ್ನು ರೂಪಿಸಲಾಗುತ್ತಿದೆ ಎಂದು ಅಮೆರಿಕದ ವಾಣಿಜ್ಯ ಇಲಾಖೆಯ ವಕ್ತಾರರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News