ಟ್ವಿಟರ್‌ ನಲ್ಲಿ ಖಾಕಿ ಚಡ್ಡಿ ಸುಡುವ ಚಿತ್ರ ಹಂಚಿಕೊಂಡ ಕಾಂಗ್ರೆಸ್

Update: 2022-09-12 17:39 GMT

ಹೊಸದಿಲ್ಲಿ, ಸೆ. 12: ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಆರ್‌ಎಸ್‌ಎಸ್ ಸಮವಸ್ತ್ರ ಖಾಕಿ ಚಡ್ಡಿ ಸುಡುವ ಚಿತ್ರವನ್ನು ಸೋಮವಾರ ಹಂಚಿಕೊಂಡಿದೆ. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ಭಾರತ್ ಜೋಡೊ ಯಾತ್ರೆ’ಗೆ ಸಂಬಂಧಿಸಿದ ಟ್ವೀಟ್‌ನಲ್ಲಿ ಖಾಕಿ ಚಡ್ಡಿ ಸುಡುವ ದೃಶ್ಯವನ್ನು ಹಂಚಿಕೊಂಡಿದೆ. ದೇಶವನ್ನು ದ್ವೇಷದ ಸಂಕೋಲೆಯಿಂದ ಹಾಗೂ ಬಿಜೆಪಿ-ಆರ್‌ಎಸ್‌ಎಸ್ ಹಾನಿಯಿಂದ ಮುಕ್ತಗೊಳಿಸಲು ನಾವು ಹಂತ ಹಂತವಾಗಿ ಗುರಿ ತಲುಪುತ್ತಿದ್ದೇವೆ ಎಂದು ಅದು ಹೇಳಿದೆ.

ಈ ಬಗ್ಗೆ ಕಾಂಗ್ರೆಸ್ ಅನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಹಿಂಸಾಚಾರವನ್ನು ಪ್ರಚಾರ ಮಾಡುತ್ತದೆ ಎಂದು ಅದು ಹೇಳಿದೆ. ಅಲ್ಲದೆ, ‘ಭಾರತ್ ಜೋಡೊ ಯಾತ್ರೆ’ಯನ್ನು ‘ಭಾರತ್ ಟೋಡೊ ಯಾತ್ರೆ’ ಎಂದು ಕರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News