ಭಾರತ-ಚೀನಾದಿಂದ ನಿಗದಿಯಂತೆ ಸೇನಾ ತುಕಡಿ ವಾಪಾಸ್: ಜನರಲ್ ಮನೋಜ್ ಪಾಂಡೆ

Update: 2022-09-12 19:12 GMT

ಹೊಸದಿಲ್ಲಿ: ಭಾರತ ಚೀನಾ ಗಡಿಯ ಗೋಗ್ರಾ-ಹಾಟ್‌ಸ್ಪ್ರಿಂಗ್ ಪ್ರದೇಶದಲ್ಲಿರುವ 15ನೇ ಗಸ್ತು ತಾಣದಿಂದ ಭಾರತ ಹಾಗೂ ಚೀನಾ ಸೇನೆಗಳು ತಮ್ಮ ಸೇನಾ ತುಕಡಿಗಳನ್ನು ವಾಪಾಸ್ ಕರೆಸಿಕೊಳ್ಳುವ ಪ್ರಕ್ರಿಯೆ ನಿಗದಿಯಂತೆ ನಡೆಯುತ್ತಿದೆ ಎಂದು ಸೇನಾ ವರಿಷ್ಠ ಜನರಲ್ ಮನೋಜ್ ಪಾಂಡೆ ಸೋಮವಾರ ಹೇಳಿದ್ದಾರೆ. ಸೆಪ್ಟಂಬರ್ 12ರ ಒಳಗೆ ಸೇನಾ ತುಕಡಿಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ  ಸೆಪ್ಟಂಬರ್ 9ರಂದು ಹೇಳಿತ್ತು.

ಲಡಾಖ್‌ಗೆ ಎರಡು ದಿನಗಳ ಭೇಟಿ ಬಳಿಕ ದಿಲ್ಲಿಗೆ ಹಿಂದಿರುಗಿರುವ ಜನರಲ್ ಪಾಂಡೆ ಅವರು ದಿಲ್ಲಿಯ ಮಾಣಿಕ್‌ಶಾ ಕೇಂದ್ರದಲ್ಲಿ ಸೋಮವಾರ ನಡೆದ ಸೇನಾ ಲಾಜಿಸ್ಟಿಕ್ ಕುರಿತ ವಿಚಾರಣ ಸಂಕೀರ್ಣದಲ್ಲಿ ಮಾತನಾಡಿದರು. ಅಲ್ಲದೆ, ಎರಡು ವರ್ಷಗಳ ಹಿಂದೆ ಭುಗಿಲೆದ್ದ ಪೂರ್ವ ಲಡಾಖ್‌ನ ಗಡಿ ಬಿಕ್ಕಟ್ಟನ್ನು ಉಲ್ಲೇಖಿಸಿದರು.

‘‘ನಾನು ಅಲ್ಲಿಗೆ ಹೋಗಲಿದ್ದೇನೆ ಹಾಗೂ ಪರಿಸ್ಥಿತಿಯ ಪರಾಮರ್ಶೆ ನಡೆಸಲಿದ್ದೇನೆ. ಆದರೆ, ಸೇನಾ ತುಕಡಿ ಪಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ನಿಗದಿಯಂತೆ ನಡೆಯಲಿದೆ’’ ಎಂದು ಅವರು ಪ್ರಕ್ರಿಯೆಯ ಸ್ಥಿತಿಗತಿ ಬಗ್ಗೆ ಪ್ರಶ್ನಿಸಿದಾಗ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News