ಮುಡಿಪು: ವಿವಿಧ ಸಂವಾದ ಗೋಷ್ಠಿಗಳೊಂದಿಗೆ ವಿಶ್ವ ಸಾಕ್ಷರತಾ ದಿನಾಚರಣೆ

Update: 2022-09-13 05:20 GMT

ಮಂಗಳೂರು, ಸೆ.12; ಸ್ವಚ್ಛತೆ, ಸುರಕ್ಷತೆ, ಸುಸ್ಥಿರತೆ, ಸಶಕ್ತ ತೆ ,ಸಮೃದ್ಧಿ, ಸೌಹಾ ರ್ದತೆ, ಮಾದರಿ ಗ್ರಾಮ , ಸಮುದಾಯ ದತ್ತ ಸಾಂತ್ವನ, ಶಾಲೆಯತ್ತ ಸಮುದಾಯ ಸಂವಾದ , ಸಂಕಲ್ಪ, ಸ್ವಚ್ಛತೆ, ಸುರಕ್ಷತೆ, ಸುಸ್ಥಿರತೆ, ಸಶಕ್ತ ತೆ ,ಸಮೃದ್ಧಿ, ಸೌಹಾ ರ್ದತೆ, ಕುರಿತಾದ ಅನುಭವ ವಿನಿಮಯ ವಿವಿಧ  ಸಂವಾದ ಗೋಷ್ಠಿ ಗಳೊಂದಿಗೆ ಜನ ಶಿಕ್ಷಣ ಟ್ರಸ್ಟ್, ಸಾಂತ್ವನ ಕೇಂದ್ರ, ಗ್ರಾಮ ವಿಕಾಸ ಕೇಂದ್ರ, ಸ್ಮೈಲ್ ಟ್ರಸ್ಟ್, ಜಿಲ್ಲಾ ಸಾಕ್ಷರತಾ ಸಮಿತಿ ಇವರ ಸಹಯೋಗ ದಲ್ಲಿ .ವಿಶ್ವ ಸಾಕ್ಷರತಾ ದಿನಾಚರಣೆ ಮುಡಿಪು ಜನಶಿಕ್ಷಣ ಕೇಂದ್ರ ದಲ್ಲಿಂದು ನಡೆಯಿತು.

ನವಸಾಕ್ಷರರ ಸಂಘನೆಯ ಮುಖಂಡರಾದ ಯಶೋಧ  ವಿಶ್ವ ಸಾಕ್ಷರತಾ ದಿನಾಚರಣೆಯ ಅಧ್ಯಕ್ಷ ತೆ ವಹಿಸಿ ಮಾತನಾಡುತ್ತಾ, ಸಾಕ್ಷರತೆಯ ಮೂಲಕ ತಾನು,ತನ್ನ ಕುಟುಂಬದಲ್ಲಿ ಆಗಿರುವ ಬದಲಾವಣೆ, ಸ್ವಾವಲಂಬನೆಗಾಗಿ ಸ್ವ ಉದ್ಯೋಗ ಕೈ ಗೊಳ್ಳಲು ಸಾಧ್ಯ ವಾಗಿರುವ ಅನುಭವ ಹಂಚಿಕೊಂಡರು.

ಸುಗ್ರಾಮ ಸಂಘಟನೆ ಯ ಅಧ್ಯಕ್ಷ ರಾದ ಶಕಿಲಾ ನೆಟ್ಲ ಮೂಡ್ನೂರು ಗ್ರಾಮ ವ್ಯಾಪ್ತಿಯಲ್ಲಿ ಸಮುದಾಯದ ಭಾಗವಹಿಸುವಿಕೆಯಿಂದ ಸರಕಾರಿ ಶಾಲೆಯಲ್ಲಿ ಆಗಿರುವ ಸಕಾರಾತ್ಮಕ ಬೆಳವಣಿಗೆಯ ಬಗ್ಗೆ ವಿವರಿಸಿದರು.

ಪುತ್ತೂರು ಸಾಂತ್ವನ ಕೇಂದ್ರ ದ ಮೂಲಕ  ದಾಖಲಾಗಿರುವ 1814 ಪ್ರಕರಣಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾಂತ್ವನ ಕೇಂದ್ರ ದ ಸ್ಪಂದನೆ ಮತ್ತು ಸಮುದಾಯ ದತ್ತ ಸಾಂತ್ವನ ಕೇಂದ್ರ ದ ಮೂಲಕ ಸ್ಥಳೀಯ ಮಹಿಳೆಯರ ಗುಂಪುಗಳು ತಮ್ಮ ಸಮಸ್ಯೆ ಗಳ ಪರಿಹಾರ ಕ್ಕೆ ಪರಸ್ಪರ ನೆರವು ನೀಡುವ ಮೂಲಕ  ಸುರಕ್ಷತೆಯ ವಾತವರಣ ನಿರ್ಮಿಸಲು ಸಹಾಯ ಮಾಡುವ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರೆತಿರುವ ಬಗ್ಗೆ  
ಪುತ್ತೂರು ಸಾಂತ್ವನ ಕೇಂದ್ರದ ಸಮಾಲೋಚಕಿ ನಿಶಾಪ್ರೀಯ ತಮ್ಮ ಅನುಭವ ಹಂಚಿಕೊಂಡರು.

ಬಂಟ್ವಾಳ ಸಾಂತ್ವನ ಕೇಂದ್ರದಲ್ಲಿ  725 ಪ್ರಕರಣಗಳು ದಾಖಲಾಗಿದೆ. ಈ ಪ್ರಕರಣಗಳಲ್ಲಿ ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹಲವು ರೀತಿಯ ದೌರ್ಜನ್ಯ ಗಳ ಬಗ್ಗೆ ದೂರು ದಾಖಲಾಗುತ್ತಿದೆ.ಈ ಸಂದರ್ಭದಲ್ಲಿ ಸಮುದಾಯ ದತ್ತ ಸಾಂತ್ವನ ಕೇಂದ್ರ  ಕೌಟುಂಬಿಕ ದೌರ್ಜನ್ಯ ತಡೆಯಲು ಪೂರಕವಾದ ಪ್ರಯತ್ನ ವಾಗಿದೆ ಎಂದು ಬಂಟ್ವಾಳ ಸಾಂತ್ವನ ಕೇಂದ್ರ ದ ಸಮಾ ಲೋಚಕಿ ಗೀತಾಶ್ರೀ ತಿಳಿಸಿದ್ದಾರೆ.

ತಮ್ಮ ಮನೆಯಲ್ಲಿ ತರಕಾರಿ ಬೆಳೆದು ಮಾರಾಟ ಮಾಡಿ ಜೀವನ ನಡೆಸುತ್ತಿರುವ ಲತಾ ಕೃಷಿ ಚಟುವಟಿಕೆ ಗೆ ಶ್ರದ್ಧೆಬೇಕು, ವೃತ್ತಿ ಯ ಬಗ್ಗೆ ಪ್ರೀತಿ ಬೇಕು. ಒಮ್ಮೊಮ್ಮೆ ನಷ್ಟವಾ ದರೂ ಭೂಮಿ ತಾಯಿ ನಮ್ಮನ್ನು ಎಂದಿಗೂ ನಮ್ಮನ್ನು ಕೈ ಬಿಟ್ಟಿಲ್ಲ  ಈ ವೃತ್ತಿ ಖುಷಿ ನೀಡಿದೆ ಎಂದರು.

ಸಾಂಪ್ರದಾಯಿಕ ಅಕ್ಕಿ ರೊಟ್ಟಿ ತಯಾರಿಸಿ ಗೃಹ ಕೈಗಾರಿಕೆ ನಡೆಸುತ್ತಿರುವ ಸುನಿತಾ ತಮ್ಮ ಸ್ವ ಉದ್ಯೋಗ ದ ಬಗ್ಗೆ ವಿವರಿಸಿದರು.
ಸ್ವಚ್ಛ ಪರಿಸರ,ಕಸ ಎಸೆಯುವವರಿಗೆ ಸ್ವಯಂ ಜಾಗೃತಿ ಮೂಡಿಸುತ್ತಿರುವ ಕಣಂತೂರು ಇಸ್ಮಾಯಿಲ್  ತಮ್ಮ ಮನೆಯಲ್ಲಿ ಮಾದರಿಯಾಗಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ಯಶಸ್ವಿಯಾದ ಅನುಭವ ಹಂಚಿಕೊಂಡರು.

ಸ್ಥಳೀಯ ವಾಗಿ ಬಟ್ಟೆ ಇತರ ಬಟ್ಟೆ ಸಾಮಾ ಗ್ರಿಗಳನ್ನು ಬಳಸಿಕೊಂಡು ಸುರಕ್ಷತಾ ಸಾಮಾಗ್ರಿಗಳನ್ನು ತಯಾರಿಸಿ, ಕಸ ವಿಲೇವಾರಿ ಸಮಸ್ಯೆ ಕಡಿತಗೊಳಿಸುವ ‌ಬಗ್ಗೆ. ಸಮಾಲೋಚನೆ ನಡೆಯಿತು.

 ಸ್ವಚ್ಛತಾ ಅಭಿಯಾನ ಮುಖ್ಯ ವಾಗಿ ಅಂಗನವಾಡಿ,ಶಾಲಾ ಮಕ್ಕಳ ಮೂಲಕ ಪರಿಣಾಮ ಕಾರಿಯಾಗಿ ಸಮುದಾಯ ವನ್ನು ತಲುಪಲು ಸಾಧ್ಯ ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ಅಗತ್ಯ. ಪರಿಸರಕ್ಕೆ ಹಾನಿಯಾಗುವ ಎಲ್ಲಾ ಕ್ಷೇತ್ರ ಗಳ ಬಗ್ಗೆ  ಸಮುದಾಯದ ಮೂಲಕ ಜಾಗೃತಿ ಮೂಡಿ ಬರಬೇಕಾಗಿದೆ ಎಂದು ದ.ಕ ಜಿಲ್ಲಾ ನರೇಗಾ ಮಾಜಿ  ಒಂಬುಡ್ಸ್ ಮನ್ ,ಜಿಲ್ಲಾ ಸ್ವಚ್ಛತಾ ರಾಯಬಾರಿ ಶೀನ ಶೆಟ್ಟಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಾಳೆಪುಣಿ ಜನಜೀವನ ಸಮಿತಿಯ ಅಧ್ಯಕ್ಷ ರಮೇಶ್ ಶೇಣವ, ನವಸಾಕ್ಷರರ ಸಂಘನೆಯ ಮುಖಂಡರಾದ ಯಶೋಧ ,ಅಬೂ ಬಕ್ಕರ್  ಜಲ್ಲಿ,ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಕೃಷ್ಣ ಮೂಲ್ಯ ಇತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News