ಕ್ಯಾನ್ಸರ್‌ಕಾರಕ ಅಂಶಗಳು? ಅಗತ್ಯ ಔಷಧಿಗಳ ಪಟ್ಟಿಯಿಂದ Rantidine ಅನ್ನು ಹೊರಗಿಟ್ಟ ಕೇಂದ್ರ ಸರಕಾರ

Update: 2022-09-13 11:51 GMT

 ಹೊಸದಿಲ್ಲಿ: ಆಸಿಡಿಟಿ ಮತ್ತು ಹೊಟ್ಟೆ ನೋವು ಸಂಬಂಧಿ ಸಮಸ್ಯೆಗೆ ವೈದ್ಯರು ಅತ್ಯಂತ ಸಾಮಾನ್ಯವಾಗಿ ಶಿಫಾರಸು ಮಾಡುವ ಆಂಟಾಸಿಡ್ ಆಗಿರುವ ರ್ಯಾನಿಟಿಡಿನ್ (Ranitidine) ಅನ್ನು ಅಗತ್ಯ ಔಷಧಿಗಳ ಪಟ್ಟಿಯಿಂದ ಕೇಂದ್ರ ಸರಕಾರ ತೆಗೆದು ಹಾಕಿದೆ. ಈ ಔಷಧಿಯಲ್ಲಿರುವ ಒಂದು ಅಂಶ ಕ್ಯಾನ್ಸರ್‍ (cancer) ಗೆ ಕಾರಣವಾಗಬಹುದೆಂಬ ಕಳವಳದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಒಟ್ಟು 26 ಔಷಧಿಗಳನ್ನು ಅಗತ್ಯ ಔಷಧಿಗಳ ಪಟ್ಟಿಯಿಂದ ಕೈಬಿಡಲಾಗಿದೆ.

Ranitidine ಔಷಧಿಯನ್ನುAciloc, Zinetac, Rantac ಸಹಿತ ಹಲವು ಬ್ರ್ಯಾಂಡ್ ಹೆಸರುಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಔಷಧಿಯಲ್ಲಿ ಕ್ಯಾನ್ಸರ್ ಉಂಟು ಮಾಡಬಹುದಾದ N-nitrosodimethylamine (NDMA))  "ಅಸ್ವೀಕಾರಾರ್ಹ ಮಟ್ಟಗಳಲ್ಲಿವೆ" ಎಂದು ಔಷಧಿ ನಿಯಂತ್ರಕರು ಕಂಡುಕೊಂಡಿದ್ದು, 2019 ರಿಂದ ಈ ಔಷಧಿಯನ್ನು ಅಮೆರಿಕಾದ ಫುಡ್ ಎಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ ಪರಿಶೀಲಿಸುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಇಂದು ಹೊಸ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ 384 ಔಷಧಿಗಳಿವೆ ಹಾಗೂ 26 ಔಷಧಿಗಳನ್ನು ಪಟ್ಟಿಯಿಂದ ಕೈಬಿಡಲಾಗಿವೆ.

ಪಟ್ಟಿಯಿಂದ ಕೈಬಿಡಲಾದ ಔಷಧಿಗಳು ಇಂತಿವೆ:

1. Alteplase
2. Atenolol
3. Bleaching Powder
4. Capreomycin
5. Cetrimide
6. Chlorpheniramine
7. Diloxanide furoate
8. Dimercaprol
9. Erythromycin
10. Ethinylestradiol
11. Ethinylestradiol(A) Norethisterone (B)
12. Ganciclovir
13. Kanamycin
14. Lamivudine (A) + Nevirapine (B) + Stavudine (C)
15. Leflunomide
16. Methyldopa
17. Nicotinamide
18. Pegylated interferon alfa 2a, Pegylated interferon alfa 2b
19. Pentamidine
20. Prilocaine (A) + Lignocaine (B)
21. Procarbazine
22. Ranitidine
23. Rifabutin
24. Stavudine (A) + Lamivudine (B) 25. Sucralfate
26. White Petrolatum

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News