ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಅಧ್ಯಕ್ಷರಾಗಿ ಲಯನ್ ಓಸ್ವಾಲ್ ಪುರ್ಟಾಡೊ ಆಯ್ಕೆ
Update: 2022-09-13 17:08 IST
ಮಂಗಳೂರು: ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಇದರ 5 ನೇ ವಾರ್ಷಿಕ ಮಹಾಸಭೆಯು ರವಿವಾರ ಸಂಜೆ ಸಂಘದ ಕಚೇರಿಯಲ್ಲಿ ನಡೆಯಿತು.
ಸಂಘದ ಸ್ಥಾಪಕ ಅಧ್ಯಕ್ಷರಾದ ಲಯನ್ ರವೂಫ್ ಬಂದರ್ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು. ನೂತನ ಅಧ್ಯಕ್ಷರಾಗಿ ಬಿಜೈ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಓಸ್ವಾಲ್ ಪುರ್ಟಾಡೊ ಅಧಿಕಾರ ವಹಿಸಿಕೊಂಡರು. ಗೌರವ ಸಲಹೆಗಾರರಾದ ಹುಸೈನ್ ಕಾಟಿಪಳ್ಳ ಪದಗ್ರಹಣ ನಡೆಸಿಕೊಟ್ಟು ರಕ್ತ ದಾನದ ಮಹತ್ವದ ಬಗ್ಗೆ ವಿವರಿಸಿದರು.
ಉಪಾಧ್ಯಕ್ಷ ಮರ್ಝೂಕ್, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ರೂಭಿಯಾ ಅಖ್ತರ್, ಜೊತೆ ಕಾರ್ಯದರ್ಶಿ ಅಬೂಬಕ್ಕರ್, ಮಹಿಳಾ ವಿಭಾಗದ ಕಾರ್ಯದರ್ಶಿ ಅಲಿಶಾ ಅಮೀನ್, ಕ್ಯಾಂಪ್ ಉಸ್ತುವಾರಿ ನಝೀರ್ ದೇರಳಕಟ್ಟೆ ಮುಂತಾದವರು ಉಪಸ್ಥಿತರಿದ್ದರು.