×
Ad

ಬಂಟ್ವಾಳ; ಕೊಳ್ನಾಡು ಗ್ರಾ.ಪಂ. ಸದಸ್ಯೆಯ ಪತಿ ಆತ್ಮಹತ್ಯೆ

Update: 2022-09-13 19:05 IST

ಬಂಟ್ವಾಳ, ಸೆ.13: ವ್ಯಕ್ತಿಯೋರ್ವರು ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಸಾಲೆತ್ತೂರು - ನೂಜಿಬೈಲು ಎಂಬಲ್ಲಿ ನಡೆದಿದೆ.

ಮೃತರನ್ನು ಕೊಳ್ನಾಡು ಗ್ರಾಮದ ಸಾಲೆತ್ತೂರು - ನೂಜಿಬೈಲು ನಿವಾಸಿ ಸುನಿಲ್ ರೈ (34) ಎಂದು ಗುರುತಿಸಲಾಗಿದೆ.

ಸುನಿಲ್ ಅವರು ಕುಡಿತದ ಚಟ ಹೊಂದಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಸುನೀಲ್ ಅವರ ಪತ್ನಿ ಸುಲೋಚನಾ ಅವರು ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News