ಮಂಗಳೂರು ತಾಲೂಕು ಮಟ್ಟದ ಕ್ರೀಡಾಕೂಟ; ಬ್ಯಾಡ್ಮಿಂಟನ್‌ನಲ್ಲಿ ಮುಸ್ಲಿಂ ವಸತಿ ಶಾಲೆ ಪ್ರಥಮ

Update: 2022-09-13 13:48 GMT

ಮಂಗಳೂರು, ಸೆ.13: ಶಕ್ತಿನಗರದ ನಾಲ್ಯಪದವು ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಮಂಗಳೂರು ತಾಲೂಕು ಮಟ್ಟದ 2022-23ನೆ ಸಾಲಿನ 14ರ ವಯೋಮಿತಿಯ ಬಾಲಕ/ಬಾಲಕಿಯರ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಅಸೈ ಮದಕದ ಸರಕಾರಿ ಮುಸ್ಲಿಂ ವಸತಿ ಶಾಲೆಯು ಪ್ರಥಮ ಸ್ಥಾನ ಪಡೆದಿದೆ.

ವಿದ್ಯಾರ್ಥಿಗಳಾದ ಕಲಂದರ್ ಇಫಾಝ್, ಅಬ್ದುಲ್ ಫತಾಹ್, ಮಾಯಿಝ್ ಅಬ್ಬಾಸ್, ಬಾಸಿಂ, ಮುದಸ್ಸಿರ್, ಮುಸ್ತಾಕ್, ಸಫ್ವಾನ್, ರಾಶಿದ್ ಹಾಗೂ ಓಸ್ವಾಲ್ಡ್ ಕುಹಿಲ್ಲೋ (ದೈಹಿಕ ಶಿಕ್ಷಕರು), ಉಮರಬ್ಬ (ಪ್ರಾಂಶುಪಾಲರು), ಹಸನಬ್ಬ (ತಂಡದ ವ್ಯವಸ್ಥಾಪಕರು) ವಿಜೇತ ತಂಡದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News