ಸುರತ್ಕಲ್ ಟೋಲ್ ಗೇಟ್; ಅ.18ರಂದು ಜನರಿಂದಲೇ ತೆರವು ಕಾರ್ಯಾಚರಣೆ: ಹೋರಾಟ ಸಮಿತಿ ಘೋಷಣೆ
ಸುರತ್ಕಲ್, ಸೆ.13: ಸುರತ್ಕಲ್ ಟೋಲ್ ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿ ನೇತೃತ್ವದಲ್ಲಿ ಒಂದು ದಿನದ ಧರಣಿ ಸುರತ್ಕಲ್ ಟೋಲ್ ಗೇಟ್ ಬಳಿ ಮಂಗಳವಾರ ನಡೆಯಿತು.
ಹೋರಾಟ ಸಮಿತಿಯ ಪರವಾಗಿ ಮುನೀರ್ ಕಾಟಿಪಳ್ಳ ಮಾತನಾಡಿ, ಅಧಿಕಾರಿಗಳು ದಿನಾಂಕ ಪ್ರಕಟಿಸಲು ಹಿಂದೇಟು ಹಾಕುತ್ತಿದ್ದು, ಭರವಸೆಯಷ್ಟೇ ನೀಡಿದ್ದಾರೆ. ಅವರ ಭರವಸೆಯಂತೆ ಟೋಲ್ ಗೇಟ್ ತೆರವಿಗೆ ಕಾಯುತ್ತೇವೆ. ಇಲ್ಲವಾದರೆ ಅಕ್ಟೋಬರ್ 18ರಂದು ನಾಗರೀಕರೇ ಸೇರಿಕೊಂಡು ಟೋಲ್ ಗೇಟ್ ತೆರವು ಮಾಡುತ್ತೇವೆ ಎಂದು ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡ ಅವರ ಸಮ್ಮುಖದಲ್ಲಿ ಘೋಷಿಸಿದರು.
ಧರಣಿ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡ ಭೇಟಿ ನೀಡಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದರು. ಟೋಲ್ ಗೇಟ್ ತೆರವು ದಿನಾಂಕ ಘೋಷಣೆ ಮಾಡುವಂತೆ ಅವರನ್ನು ಧರಣಿ ನಿರತರು ಆಗ್ರಹಿಸಿದರು.
ಆ ವೇಳೆ ಮಾತನಾಡಿದ ಲಿಂಗೇಗೌಡ ಅವರು, ಈ ಸಂಬಂಧ ಪೇಪರ್ ಕೆಲಸಗಳು ನಡೆಯುತ್ತಿದೆ. 20 ದಿನಗಳಿಂದ ಗರಿಷ್ಠ ಒಂದು ತಿಂಗಳಲ್ಲಿ ಟೋಲ್ ತೆರವು ಮಾಡಲಾಗುವುದು ಎಂದರು.
ಈ ವೇಳೆ ನಿರ್ಧಿಷ್ಟ ದಿನಾಕ ಪ್ರಕಟಿಸುವಂತೆ ಹೋರಾಟ ಸಮಿತಿ ಪಟ್ಟು ಹಿಡಿದಿದ್ದು, ಹೋರಾಟ ಸಮಿತಿಯ ಪರವಾಗಿ ಮುನೀರ್ ಕಾಟಿಪಳ್ಳ ಮಾತನಾಡಿ, ಅಧಿಕಾರಿ ದಿನಾಂಕ ಪ್ರಕಟಿಸಲು ಹಿಂದೇಟು ಹಾಕುತ್ತಿದ್ದು, ಭರವಸೆಯಷ್ಟೇ ನೀಡಿದ್ದಾರೆ. ಅವರ ಭರವಸೆಯಂತೆ ಟೋಲ್ ಗೇಟ್ ತೆರವಿಗೆ ಕಾಯುತ್ತೇವೆ. ಇಲ್ಲವಾದರೆ ಅಕ್ಟೋಬರ್ 18ರಂದು ನಾಗರೀಕರೇ ಸೇರಿಕೊಂಡು ಟೋಲ್ ಗೇಟ್ ತೆರವು ಮಾಡುತ್ತೇವೆ ಎಂದು ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡ ಅವರ ಸಮ್ಮುಖದಲ್ಲಿ ಘೋಷಿಸಿದರು.